ಶುಕ್ರವಾರ, ಜುಲೈ 23, 2021
22 °C

ವಿವೊ ವೈ ಸರಣಿ ಸ್ಮಾರ್ಟ್‌ಫೋನ್ ದರ ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ವಿವೊ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ನೂತನ ವೈ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ.

ವಿವೋ Y20A ಮತ್ತು Y20G ಫೋನ್ ಬೆಲೆಯಲ್ಲಿ ₹1,000 ವರೆಗೆ ಏರಿಕೆಯಾಗಿದೆ.

ಪರಿಷ್ಕೃತ ದರ ವಿವೊ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ನಲ್ಲಿ ಕಾಣಿಸಿಕೊಂಡಿದೆ.

ಹೊಸ ದರ ಎಷ್ಟಿದೆ?

ವಿವೊ Y20A ಮತ್ತು Y20G ನೂತನ ದರ ಇಲ್ಲಿದೆ. ವಿವೊ Y20A ಬೆಲೆ 3 GB + 64 GB ಮಾದರಿ ದರ ಪ್ರಸ್ತುತ ₹11,990 ಇದೆ.

ವಿವೊ Y20G ಸ್ಮಾರ್ಟ್‌ಫೋನ್ ದರ ₹1,000 ಏರಿಕೆಯಾಗಿದ್ದು, 4 GB + 64 GB ಮಾದರಿ ದರ ಈಗ ₹13,990 ಇದೆ. ಅಲ್ಲದೆ, 6 GB + 128 GB ಮಾದರಿಗೆ ಈಗ ದೇಶದಲ್ಲಿ ಬೆಲೆ ಏರಿಕೆ ಬಳಿಕ ₹15,990 ಇದೆ.

ಇತ್ತೀಚೆಗಷ್ಟೇ ವಿವೊ Y1s ಮತ್ತು ವಿವೊ Y12s ಸ್ಮಾರ್ಟ್‌ಫೋನ್ ಬೆಲೆಯನ್ನು ವಿವೊ ₹500 ಏರಿಕೆ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು