ಗುರುವಾರ , ಮೇ 19, 2022
21 °C

Vivo Y53s: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿವೊ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

VIVO DH File

ಬೆಂಗಳೂರು: ವಿವೊ, ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಆಕರ್ಷಕ ಮಾದರಿಯೊಂದನ್ನು ಬಿಡುಗಡೆ ಮಾಡಿದೆ.

ವಿವೊ ವೈ ಸರಣಿಯಲ್ಲಿ Y53s ಪರಿಚಯಿಸಲ್ಪಟ್ಟಿದ್ದು, ಮೀಡಿಯಾಟೆಕ್ ಹಿಲಿಯೊ ಪ್ರೊಸೆಸರ್ ಮತ್ತು 64 ಮೆಗಾಪಿಕ್ಸೆಲ್ ಸಹಿತ ತ್ರಿವಳಿ ಕ್ಯಾಮರಾ ವ್ಯವಸ್ಥೆಯಿದೆ.

ವಿವೊ Y53s ತಾಂತ್ರಿಕ ವೈಶಿಷ್ಟ್ಯಗಳು

ನೂತನ ವಿವೊ Y53s, 8 GB RAM + 128 GB ಹಾಗೂ 256 GB ಸ್ಟೋರೇಜ್ ಮಾದರಿ ಹೊಂದಿದೆ. 

ಹಸಿರು ಮತ್ತು ನೇರಳೆ ಬಣ್ಣದಲ್ಲಿ ಹೊಸ ವಿವೊ Y53s ದೊರೆಯಲಿದ್ದು, ಭಾರತದಲ್ಲಿ ಲಭ್ಯತೆ ಮತ್ತು ಬೆಲೆ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ. ಚೀನಾದ ಮಾರುಕಟ್ಟೆಯಲ್ಲಿ ವಿವೊ Y53s, CNY 1,799 ದರ ಹೊಂದಿದೆ, ಅಂದರೆ ದೇಶದಲ್ಲಿ ಅಂದಾಜು ₹20,500 ಆಗಲಿದೆ.

ಆಂಡ್ರಾಯ್ಡ್ 11 ಆಧಾರಿತ ಫನ್‌ಟಚ್‌ ಓಎಸ್ 11.1, 6.58 ಇಂಚಿನ ಫುಲ್ ಎಚ್‌ಡಿ+ ಡಿಸ್‌ಪ್ಲೇ ಇದರಲ್ಲಿದೆ. ಮೀಡಿಯಾಟೆಕ್ ಹಿಲಿಯೊ G80 ಪ್ರೊಸೆಸರ್, 5000mAh ಬ್ಯಾಟರಿ ಹೊಸ ವಿವೊ Y53s ಫೋನ್‌ನಲ್ಲಿದೆ.

ಅಲ್ಲದೆ, 64+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಕೂಡ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು