ಹಬ್ಬದ ಋತುವನ್ನು ಇನ್ನಷ್ಟು ಆಕರ್ಷಕವಾಗಿಸಲು ವಿವೊ ಕಂಪನಿಯು ದೇಶದ ಮಾರುಕಟ್ಟೆಗೆ ವಿ20 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ದೀಪಾವಳಿಯ ವೇಳೆಗೆ ವಿವೊ ವಿ20 ಎಸ್‌ಇ ಬಿಡುಗಡೆ ಮಾಡುವುದಾಗಿಯೂ ತಿಳಿಸಿದೆ.

ಕಂಪನಿಯು ತನ್ನ ವಿ ಸರಣಿಯಲ್ಲಿ ಕ್ಯಾಮೆರಾಗೆ ಆದ್ಯತೆ ನೀಡಿರುವ ಹೊಸ ಹ್ಯಾಂಡ್‌ಸೆಟ್ ಇದಾಗಿದೆ. 44 ಎಂಪಿ ಐ–ಆಟೊ ಫೋಕಸ್ ಸೆಲ್ಫಿ ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆ. 2020ರಲ್ಲಿ ಭಾರತದ ಅತ್ಯಂತ ತೆಳುವಾದ (7.38ಎಂಎಂ) ಸ್ಮಾರ್ಟ್‌ಪೋನ್ ಇದಾಗಿದೆ ಎನ್ನುವುದು ಕಂಪನಿಯ ಹೇಳಿಕೆ.

64ಎಂಪಿ ಪ್ರೈಮರಿ ಕ್ಯಾಮೆರಾ, 5ಎಂಪಿ ಸೂಪರ್ ವೈಡ್ ಆ್ಯಂಗಲ್, ಸೂಪರ್ ಮ್ಯಾಕ್ರೊ ಹಾಗೂ ಬೊಕೆ ಲೆನ್ಸ್ ಹಾಗೂ 2 ಎಂಪಿ ಮೊನೊ ಲೆನ್ಸ್ ಹೊಂದಿದೆ.

ಆಂಡ್ರಾಯ್ಡ್ 11 ಆಧಾರಿತ ಫನ್‌ಟಚ್ ಒಸ್ 11ನಿಂದ ಇದು ಕಾರ್ಯಾಚರಿಸುತ್ತದೆ. 6.44 ಇಂಚಿನ ಅಮೊಎಲ್‌ಇಡಿ ಎಫ್‌ಎಚ್‌ಡಿ ಫ್ಲಸ್ ಹಾಲೊ ಫುಲ್ ವೀವ್ ಡಿಸ್‌ಪ್ಲೇ, 4,000 ಎಂಎಎಚ್ ಬ್ಯಾಟರಿ, ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 720ಜಿ ಪ್ರೊಸೆಸರ್ ಇದೆ.

ಮಿಡ್‌ನೈಟ್ ಜಾಜ್, ಸನ್‌ಸೆಟ್ ಮೆಲೊಡಿ ಮತ್ತು ಮೂನ್‌ಲೈಟ್ ಸೊನಾಟ... ಹೀಗೆ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಬೆಲೆ 8+128ಜಿಬಿಗೆ₹ 24,990, 8+256ಜಿಬಿಗೆ ₹ 27,990.

ಮಂಗಳವಾರದಿಂದಲೇ ಮುಂಗಡ ಬುಕಿಂಗ್ ಆರಂಭವಾಗಿದ್ದು, ಅಕ್ಟೋಬರ್ 20ರಿಂದ ವಿವೊ ಇಂಡಿಯಾ ಇ–ಸ್ಟೋರ್, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.