ಭಾನುವಾರ, ಆಗಸ್ಟ್ 14, 2022
26 °C

ವಿವೊ ವೈ 51 ಬಿಡುಗಡೆ: 48 ಎಂಪಿ ಕ್ಯಾಮೆರಾ, 5000 ಎಂಎಎಚ್‌ ಬ್ಯಾಟರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Vivo Y 51

ಬೆಂಗಳೂರು: ವಿವೊ ಕಂಪನಿಯು ಭಾರತದ ಮಾರುಕಟ್ಟೆಗೆ ವೈ 51 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಮೂಲಕ ತನ್ನ ವೈ ಸರಣಿಯನ್ನು ವಿಸ್ತರಿಸಿದೆ.

ಭಾರತದಲ್ಲಿಯೇ ತಯಾರಿಸಿ ಅಭಿಯಾನದ ಭಾಗವಾಗಿ ಗ್ರೇಟರ್‌ ನೊಯಿಡಾದಲ್ಲಿರುವ ಘಟಕದಲ್ಲಿ ಈ ಫೋನ್‌ ತಯಾರಾಗಿದೆ ಎಂದು ಕಂಪನಿ ತಿಳಿಸಿದೆ.

8ಜಿಬಿ+128 ಜಿಬಿಯ ಈ ಸ್ಮಾರ್ಟ್‌ಫೋನ್‌ ಬೆಲೆ ₹ 17,990 ಇದೆ. ಟೈಟಾನಿಯಂ ಸಫೈರ್‌ ಮತ್ತು ಕ್ರಿಸ್ಟಲ್‌ ಸಿಂಪೊನಿ ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: 

48ಎಂಪಿ ಎಐ ಟ್ರಿಪಲ್‌ ರಿಯರ್‌ ಕ್ಯಾಮೆರಾದಲ್ಲಿ ಹಗಲು ಮತ್ತು ರಾತ್ರಿ ವೇಳೆಯೂ ಗುಣಮಟ್ಟದ ಫೊಟೊಗಳನ್ನು ತೆಗೆಯಬಹುದು ಎಂದು ಕಂಪನಿ ಹೇಳಿದೆ. ಸೆಲ್ಫಿಗಾಗಿ 16 ಎಂಪಿ ಎಚ್‌ಡಿ ಫ್ರಂಟ್‌ ಕ್ಯಾಮೆರಾ ಇದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 6 ಸಿರೀಸ್‌ ಪ್ರೊಸೆಸರ್, 6.58 ಇಂಚು ಎಫ್‌ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ, 5 ಸಾವಿರ ಎಂಎಎಚ್ ಬ್ಯಾಟರಿ ಹೊಂದಿದೆ. ಎಐ ಪವರ್ ಸೇವಿಂಗ್‌ ತಂತ್ರಜ್ಞಾನದಿಂದಾಗಿ ಒಂದು ಬಾರಿ ಪೂರ್ತಿ ಚಾರ್ಜ್‌ ಮಾಡಿದರೆ 14.3 ಗಂಟೆಗಳವರೆಗೆ ಆನ್‌ಲೈನ್‌ ಎಚ್‌ಡಿ ಮೂವಿ ಸ್ಟ್ರೀಮಿಂಗ್‌ ಮಾಡಬಹುದು.

ಎರಡು ಸಿಮ್‌ ಕಾರ್ಡ್‌ ಮತ್ತು 1 ಮೊಮೊರಿ ಕಾರ್ಡ್‌ ಸ್ಲಾಟ್‌ಗಳನ್ನು ಹೊಂದಿದೆ. 1 ಟಿಬಿವರೆಗೆ ಮೆಮೊರಿ ವಿಸ್ತರಣೆ ಮಾಡಬಹುದಾಗಿದೆ.

ವೈ 30: ರ್‍ಯಾಮ್‌ ಅಪ್‌ಗ್ರೇಡ್‌ನೊಂದಿಗೆ ವಿವೊ ವೈ30 ಫೋನ್‌ ಸಹ ಬಿಡುಗಡೆ ಮಾಡಿದೆ. 6+128ಜಿಬಿಯಲ್ಲಿ ಲಭ್ಯವಿದೆ. 13 ಎಂಪಿ ಮೇನ್‌ ಕ್ಯಾಮೆರಾ, 8 ಎಂಪಿ ಸೂಪರ್‌ ವೈಡ್‌ ಆ್ಯಂಗಲ್‌ ಕ್ಯಾಮೆರಾ, 2 ಎಂಪಿ ಸೂಪರ್‌ ಮ್ಯಾಕ್ರೊ ಮತ್ತು 2 ಎಂಪಿ ಬೊಕೆ ಕ್ಯಾಮೆರಾ ಇದೆ. 6.47 ಇಂಚಿನ ಡಿಸ್‌ಪ್ಲೇ, ಶೇ 90.7ರಷ್ಟು ಸ್ಕ್ರೀನ್‌ ಟು ಬಾಡಿ ರೇಶಿಯೊ ಹೊಂದಿದೆ. ಇದರಲ್ಲಿ 5 ಸಾವಿರ ಎಂಎಎಚ್‌ ಬ್ಯಾಟರಿ ಇದೆ. ಮೀಡಿಯಾಟೆಕ್‌ ಹೀಲಿಯೊ ಪಿ35 ಪ್ರೊಸೆಸರ್‌ ಇರುವ ಇದರ ಬೆಲೆ ₹ 14,990 ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು