ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕೆಟ್ ಗಾತ್ರದ ಹಾರ್ಡ್‌ಡಿಸ್ಕ್ ಪರಿಚಯಿಸಿದ ವೆಸ್ಟರ್ನ್ ಡಿಜಿಟಲ್

ವೆಸ್ಟರ್ನ್ ಡಿಜಿಟಲ್ ಎಸ್‌ಎಸ್‌ಡಿ ಮಾರುಕಟ್ಟೆಗೆ ಬಿಡುಗಡೆ
Last Updated 21 ಸೆಪ್ಟೆಂಬರ್ 2021, 10:42 IST
ಅಕ್ಷರ ಗಾತ್ರ

ಬೆಂಗಳೂರು: ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್, ಮತ್ತಿತರ ಅವಶ್ಯಕತೆಗಳಿಗೆ ಸಂಗ್ರಹಣಾ ಸಾಮರ್ಥ್ಯ ಒದಗಿಸುವ ವೆಸ್ಟರ್ನ್ ಡಿಜಿಟಲ್, ಪಾಕೆಟ್ ಗಾತ್ರದ ಹಾರ್ಡ್ ಡಿಸ್ಕ್ ಬಿಡುಗಡೆ ಮಾಡಿದೆ.

ವೆಸ್ಟರ್ನ್ ಡಿಜಿಟಲ್ ಎಲಿಮೆಂಟ್ಸ್ ಎಸ್‌ಇ ಎಸ್‌ಎಸ್‌ಡಿ ಮಾದರಿ, ಅತ್ಯಂತ ಚಿಕ್ಕ ಗಾತ್ರದಲ್ಲಿದ್ದು, 480 GB ಸಾಮರ್ಥ್ಯದಿಂದ ತೊಡಗಿ, 2 ಟಿಬಿ ವರೆಗಿನ ಸ್ಟೋರೇಜ್ ಹೊಂದಿದೆ.

ನೂತನ ಸರಣಿಯ ವೆಸ್ಟರ್ನ್ ಡಿಜಿಟಲ್ ಹಾರ್ಡ್ ಡಿಸ್ಕ್, 27 ಗ್ರಾಂ ತೂಕ ಹೊಂದಿದ್ದು, ಆರಂಭಿಕ ಆವೃತ್ತಿ ದರ ₹6,499 ಮತ್ತು 2 ಟಿಬಿ ಮಾದರಿಗೆ ₹19,659 ದರದವರೆಗೆ ಇದೆ. 1 ಟಿಬಿ ಮಾದರಿಗೆ ₹9,839 ದರ ನಿಗದಿಪಡಿಸಲಾಗಿದೆ.

ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್ ಮೂಲಕ ವೆಸ್ಟರ್ನ್ ಡಿಜಿಟಲ್ ನೂತನ ಹಾರ್ಡ್‌ಡಿಸ್ಕ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಯುಎಸ್‌ಬಿ 3.0 ಮತ್ತು 400Mbps ವೇಗದ ವರೆಗಿನ ಡಾಟಾ ವರ್ಗಾವಣೆ ವೇಗ ಇದರ ವಿಶೇಷತೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT