ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ 'ಆ್ಯಪಲ್', ಭಾರತ ಮೂಲದ ಸಾಬಿಹ್ ಖಾನ್ ಅವರನ್ನು ಮುಖ್ಯ ಕಾರ್ಯಾಚರಣೆ ಅಧಿಕಾರಿಯನ್ನಾಗಿ (ಸಿಒಒ) ಮಂಗಳವಾರ ನೇಮಕ ಮಾಡಿದೆ.

ಯಾರು ಈ ಸಾಬಿಹ್ ಖಾನ್?

ಸಾಬಿಹ್ ಖಾನ್ ಉತ್ತರ ಪ್ರದೇಶದ ಮೊರಾದಾಬಾದ್ ಮೂಲದವರು.

1966ರಲ್ಲಿ ಜನಿಸಿದ ಅವರು, ನಂತರ ಪಾಲಕರೊಂದಿಗೆ ಸಿಂಗಾಪುರಕ್ಕೆ ಸ್ಥಳಾಂತರಗೊಂಡರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ನಂತರ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದಾರೆ.

ಟಫ್ಟ್ ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಹಾಗೂ ರೆನ್ಸ್ಸೆಲಾರ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

1995ರಲ್ಲಿ ಆ್ಯಪಲ್ ಸೇರುವ ಮುನ್ನ, ಕ್ಯಾಲಿಫೋರ್ನಿಯಾದ ಕೂಪರ್ಟಿನೊ ಮೂಲದ ಕಂಪನಿ ಜಿಇ ಪ್ಲಾಸ್ಟಿಕ್ಸ್ನಲ್ಲಿ ಆ್ಯಪ್ ಡೆವಲಪರ್ ಮತ್ತು ತಾಂತ್ರಿಕ ತಂಡದ ಮುಖ್ಯಸ್ಥರಾಗಿದ್ದರು.

ನಂತರ ಅವರು, ಆ್ಯಪಲ್ನ ಜಾಗತಿಕ ಸರಬರಾಜು ವಿಭಾಗದ ಉಸ್ತುವಾರಿಯಾಗಿ ನೇಮಕೊಂಡಿದ್ದರು. 'ಆ್ಯಪಲ್ನ ಪ್ರತಿಯೊಂದು ವಿನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಸಾಬಿಹ್ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ' ಎಂದು ಆ್ಯಪಲ್ ಹೇಳಿಕೆ ಬಿಡುಗಡೆ ಮಾಡಿದೆ.
.ಆ್ಯಪಲ್ ಕಂಪನಿಯ COO ಆಗಿ ಭಾರತ ಮೂಲದ ಸಾಬಿಹ್ ಖಾನ್ ನೇಮಕ.
30 ವರ್ಷಗಳಿಂದ ಕಂಪನಿಯಲ್ಲಿರುವ ಹಾಗೂ ಸದ್ಯ ಕಾರ್ಯಾಚರಣೆ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿರುವ ಸಾಬಿಹ್, ಈ ತಿಂಗಳ ಅಂತ್ಯದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದು, ಬಹು ಸಮಯದಿಂದ ಈ ಹುದ್ದೆಯಲ್ಲಿದ್ದ ಜೆಫ್ ವಿಲಿಯಮ್ಸ್ ಅವರ ಉತ್ತರಾಧಿಕಾರಿಯಾಗಿ ಮುಂದುರಿಯಲಿದ್ದಾರೆ ಎಂದು ಆ್ಯಪಲ್ ಹೇಳಿಕೆಯಲ್ಲಿ ತಿಳಿಸಿದೆ.

ಸಬ್ಹಿ ಬಗ್ಗೆ ಟಿಮ್ ಕುಕ್ ಹೇಳುವುದೇನು?
'ಅದ್ಭುತ ತಂತ್ರಜ್ಞರಾಗಿರುವ ಸಾಬಿಹ್, ಆ್ಯಪಲ್ನ ಪೂರೈಕೆ ಸರಪಳಿಯನ್ನು ರೂಪಿಸಿದ ಪ್ರಮುಖರಲ್ಲಿ ಒಬ್ಬರು. ಸುಸ್ಥಿರ ಪರಿಸರಕ್ಕೆ ಪೂರಕವಾದ ನಮ್ಮ ಮಹತ್ವಾಕಾಂಕ್ಷೆಯ ಪ್ರಯತ್ನವನ್ನು ಅವರು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಆ ಮೂಲಕ ಆ್ಯಪಲ್ನ ಇಂಗಾಲ ಪ್ರಮಾಣ ತಗ್ಗಿಸುವ ಪ್ರಯತ್ನದಲ್ಲಿ ಶೇ 60ರಷ್ಟು ಪ್ರಗತಿಗೆ ನೆರವಾಗಿದ್ದಾರೆ' ಎಂದು ಸಿಇಒ ಟಿಮ್ ಕುಕ್ ಹೇಳಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಸಾಬಿಹ್ ಅವರನ್ನು ಹೃದಯ ಮತ್ತು ಮೌಲ್ಯಗಳನ್ನು ಒಟ್ಟಿಗೆ ಮುನ್ನಡೆಸುವ ವ್ಯಕ್ತಿ ಎಂದು ಶ್ಲಾಘಿಸಿರುವ ಕುಕ್, ಅಸಾಧಾರಣ ಸಿಒಒ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.