ಭಾನುವಾರ, ಸೆಪ್ಟೆಂಬರ್ 26, 2021
28 °C

ದೇಶದಲ್ಲಿ ಶಿಯೋಮಿ ರೆಡ್ಮಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಶಿಯೋಮಿ ರೆಡ್ಮಿ ಸರಣಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಏರಿಕೆಯಾಗಿದೆ.

ಶಿಯೋಮಿ, ದೇಶದಲ್ಲಿ ರೆಡ್ಮಿ ಮತ್ತು ಎಂಐ ಸರಣಿಯಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತದೆ. ಈ ಪೈಕಿ, ರೆಡ್ಮಿ ಹಲವು ಮಾದರಿಗಳ ದರದಲ್ಲಿ ಹೆಚ್ಚಳವಾಗಿದೆ.

ಎಷ್ಟು ಹೆಚ್ಚಳ?

ರಿಯಲ್‌ಮಿ ಫೋನ್‌ಗಳ ದರ ಏರಿಕೆಯ ಬೆನ್ನಲ್ಲೇ, ಶಿಯೋಮಿ ಕೂಡ ದರ ಪರಿಷ್ಕರಿಸಿದ್ದು, ₹300 ರಿಂದ ₹500 ವರೆಗೆ ಹೆಚ್ಚಳವಾಗಿದೆ.

ಪರಿಷ್ಕೃತ ದರ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಎಂಐ ಡಾಟ್ ಕಾಂ.ನಲ್ಲಿ ಕಾಣಿಸಿಕೊಂಡಿದೆ.

ಯಾವ ಮಾದರಿಗಳ ದರ ಏರಿಕೆ?

ಶಿಯೋಮಿ ರೆಡ್ಮಿ 9, 4GB + 64GB ಮಾದರಿಗೆ ₹500 ಹೆಚ್ಚಳವಾಗಿದ್ದು, ₹9,499 ದರಕ್ಕೆ ಲಭ್ಯವಾಗುತ್ತಿದೆ. ರೆಡ್ಮಿ 9 ಪವರ್, 4GB + 64GB ಆವೃತ್ತಿಗೆ ₹500 ಏರಿಕೆಯಾಗಿದ್ದು, ₹11,499 ದರ ಹೊಂದಿದೆ.

ರೆಡ್ಮಿ 9 ಪ್ರೈಮ್, 4GB + 64GB ಮಾದರಿಗೆ ₹500 ಹೆಚ್ಚಳದ ಬಳಿಕ ₹10,499 ಕ್ಕೆ ದೊರೆಯುತ್ತಿದೆ.

ರೆಡ್ಮಿ 9i, 4GB + 64GB ಆವೃತ್ತಿಗೆ ₹300 ಏರಿಕೆಯಾಗಿದ್ದು, ₹8,799 ಕ್ಕೆ ಮತ್ತು ರೆಡ್ಮಿ ನೋಟ್ 10T 5G, 4GB + 64GB ಮಾದರಿಗೆ ₹500 ಏರಿಕೆ ಬಳಿಕ, ₹14,999 ದರಕ್ಕೆ ದೊರೆಯುತ್ತಿದೆ.

ರೆಡ್ಮಿ ನೋಟ್ 10T 5G, 6GB + 128GB ಮಾದರಿಗೆ ₹500 ದರ ಏರಿಕೆ ಬಳಿಕ, ₹16,999 ಹಾಗೂ ರೆಡ್ಮಿ ನೋಟ್ 10s, 6GB + 128GB ಮಾದರಿಗೆ ₹500 ದರ ಹೆಚ್ಚಳವಾಗಿದ್ದು, ₹16,499 ದರಕ್ಕೆ ದೊರೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು