ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶಿಯೋಮಿ 11ಟಿ ಸರಣಿ, ಶಿಯೋಮಿ ಪ್ಯಾಡ್ 5 ಬಿಡುಗಡೆ

Last Updated 16 ಸೆಪ್ಟೆಂಬರ್ 2021, 9:21 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಶಿಯೋಮಿ, ಎರಡು ನೂತನ ಫೋನ್‌ಗಳನ್ನು ಪರಿಚಯಿಸಿದೆ.

ಶಿಯೋಮಿ 11ಟಿ ಮತ್ತು 11ಟಿ ಪ್ರೊ ಎಂಬ ಎರಡು ನೂತನ ಸ್ಮಾರ್ಟ್‌ಫೋನ್ ಜತೆಗೆ, ಶಿಯೋಮಿ ಪ್ಯಾಡ್ 5 ಟ್ಯಾಬ್ಲೆಟ್ ಕೂಡ ಬಿಡುಗಡೆಯಾಗಿದೆ.

ಶಿಯೋಮಿ, ಎಂಐ ಬ್ರ್ಯಾಂಡಿಂಗ್ ಅನ್ನು ತೆಗೆದುಹಾಕಿ, ಪ್ರೀಮಿಯಂ ಫೋನ್‌ಗಳಿಗೆ ಶಿಯೋಮಿ ಹೆಸರನ್ನೇ ಬಳಸಲು ಮುಂದಾಗಿದೆ. ಅದರಂತೆ ಹೊಸದಾಗಿ ಬಿಡುಗಡೆಯಾಗಿರುವ 11 ಸರಣಿ ಫೋನ್‌ಗಳಿಗೆ ಶಿಯೋಮಿ ಹೆಸರನ್ನೇ ಬಳಸಿದೆ.

ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿ ಶಿಯೋಮಿ, 11ಟಿ ಸರಣಿ ಬಿಡುಗಡೆಯಾಗಿದೆ. 8 GB + 128 GB ಮಾದರಿಗೆ ಅಲ್ಲಿನ ದರಕ್ಕೆ ಹೋಲಿಸಿದರೆ, ದೇಶದಲ್ಲಿ ಅಂದಾಜು ₹43,300 ಇದೆ. ಶಿಯೋಮಿ 11ಟಿ ಪ್ರೊ, ₹56,400 ಮತ್ತು ಶಿಯೋಮಿ ಪ್ಯಾಡ್ 5 ದರ, ₹30,300 ಇದೆ.

ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆ ಮತ್ತು ಬೆಲೆ ವಿವರವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT