ಮಂಗಳವಾರ, ಸೆಪ್ಟೆಂಬರ್ 28, 2021
22 °C

Redmi 10 Prime: ಶಿಯೋಮಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Xiaomi India

ಬೆಂಗಳೂರು: ಶಿಯೋಮಿ, ರೆಡ್ಮಿ ಸ್ಮಾರ್ಟ್‌ಫೋನ್ ಸರಣಿಯಲ್ಲಿ ನೂತನ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

ಶಿಯೋಮಿ ರೆಡ್ಮಿ 10 ಪ್ರೈಮ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕಳೆದ ವರ್ಷ ಬಿಡುಗಡೆಯಾಗಿದ್ದ ರೆಡ್ಮಿ 9 ಪ್ರೈಮ್ ಮಾದರಿಯ ಪರಿಷ್ಕೃತ ಆವೃತ್ತಿಯಂತೆ ಕಾಣಿಸುತ್ತಿದೆ.

ಬೆಲೆ ಎಷ್ಟಿದೆ?

ರೆಡ್ಮಿ 10 ಪ್ರೈಮ್, 4 GB + 64 GB ಮಾದರಿಗೆ ₹12,499 ದರವಿದೆ. 6 GB + 128 GB ಆವೃತ್ತಿಗೆ ₹14,499 ಬೆಲೆ ಇದೆ. ಸೆ. 7ರಿಂದ ಅಮೆಜಾನ್, ಎಂಐ ಸ್ಟೋರ್ ಮತ್ತು ಆನ್‌ಲೈನ್ ಮೂಲಕ ದೊರೆಯಲಿದೆ. ಎಚ್‌ಡಿಎಫ್‌ಸಿ ಕಾರ್ಡ್ ಬಳಕೆಗೆ ₹750 ಡಿಸ್ಕೌಂಟ್ ಕೂಡ ದೊರೆಯಲಿದೆ.

ರೆಡ್ಮಿ 10 ಪ್ರೈಮ್

ಶಿಯೋಮಿ ರೆಡ್ಮಿ 10 ಪ್ರೈಮ್ ಫೋನ್, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮರಾ ಜತೆಗೆ, 8+2 ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು, 8 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದೆ. 6000mAh ಬ್ಯಾಟರಿ ಬೆಂಬಲ ಕೂಡ ಇದರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು