ಮಂಗಳವಾರ, ಡಿಸೆಂಬರ್ 7, 2021
20 °C

Redmi TV: ಎರಡು ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ಶಿಯೋಮಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Xiaomi TV

ಬೆಂಗಳೂರು: ಹಬ್ಬಗಳ ಸೀಸನ್ ಬರುತ್ತಿದ್ದಂತೆ ಹೊಸ ಗ್ಯಾಜೆಟ್ ಮತ್ತು ಗೃಹಬಳಕೆಯ ಉತ್ಪನ್ನಗಳ ಬಿಡುಗಡೆ ಹೆಚ್ಚಾಗುತ್ತಿದೆ. ಶಿಯೋಮಿ, ರೆಡ್ಮಿ ಸ್ಮಾರ್ಟ್ ಟಿವಿ ಸರಣಿಯಲ್ಲಿ ಎರಡು ನೂತನ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ರೆಡ್ಮಿ ಸ್ಮಾರ್ಟ್ ಟಿವಿ 32 ಮತ್ತು ಸ್ಮಾರ್ಟ್ ಟಿವಿ 43 ದೇಶದ ಮಾರುಕಟ್ಟೆಗೆ ಬುಧವಾರ ಲಗ್ಗೆ ಇರಿಸಿದೆ.

ಬೆಲೆ ಮತ್ತು ಲಭ್ಯತೆ

ನೂತನ ರೆಡ್ಮಿ ಸ್ಮಾರ್ಟ್ ಟಿವಿ 32 ಇಂಚಿನ ಮಾದರಿ ಬೆಲೆ ದೇಶದಲ್ಲಿ ₹15,999 ಇದ್ದು, ರೆಡ್ಮಿ ಸ್ಮಾರ್ಟ್ ಟಿವಿ 43 ಇಂಚಿನ ಆವೃತ್ತಿ ಬೆಲೆ ₹25,999 ಇದೆ.

ಅಮೆಜಾನ್ ಮತ್ತು ಎಂಐ ಸ್ಟೋರ್, ರಿಟೇಲ್ ಮಳಿಗೆ ಮೂಲಕ ನೂತನ ಶಿಯೋಮಿ ರೆಡ್ಮಿ ಟಿವಿ ದೇಶದಲ್ಲಿ ದೊರೆಯಲಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ಮೂಲಕ ಹೊಸ ರೆಡ್ಮಿ ಟಿವಿ ಬಿಡುಗಡೆಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು