ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Diwali with Mi: ಶಓಮಿ ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿ ಖರೀದಿಗೆ ಡಿಸ್ಕೌಂಟ್

ಹಬ್ಬದ ಸಂದರ್ಭದಲ್ಲಿ ವಿಶೇಷ ಮಾರಾಟಕ್ಕೆ ಶಓಮಿ ಸಜ್ಜು
Last Updated 23 ಸೆಪ್ಟೆಂಬರ್ 2022, 7:51 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಹಬ್ಬದ ಸರಣಿ ಆರಂಭವಾಗುತ್ತಿದೆ. ಜತೆಗೆ ಹಬ್ಬದ ವಿಶೇಷ ಮಾರಾಟ ಮತ್ತು ಕೊಡುಗೆಗಳು ಕೂಡ ಜನರಿಗೆ ದೊರೆಯುತ್ತಿದೆ. ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ತಯಾರಿಕಾ ಕಂಪನಿ ಶಓಮಿ, ದೀಪಾವಳಿ ಹಬ್ಬದ ವಿಶೇಷ ಮಾರಾಟ ಘೋಷಿಸಿದೆ.

ದಿವಾಲಿ ವಿತ್ ಎಂಐ, ಟೆಕ್‌ ಕಾ ಶುಭ್ ಮುಹೂರ್ತ್ ಎನ್ನುವ ವಿಶೇಷ ಅಭಿಯಾನವನ್ನು ಶಓಮಿ ದೇಶದಲ್ಲಿ ಆರಂಭಿಸಿದೆ.

ಶಓಮಿ ರೆಡ್ಮಿ ಅಧಿಕೃತ ವೆಬ್‌ ತಾಣದಲ್ಲಿ ಇ ಕಾಮರ್ಸ್ ಮೂಲಕ ದೀಪಾವಳಿ ಹಬ್ಬದ ಕೊಡುಗೆ ದೊರೆಯಲಿದೆ.

ಪ್ರಮುಖ ಎಂಐ, ರೆಡ್ಮಿ ಮತ್ತು ಶಓಮಿ ಸ್ಮಾರ್ಟ್‌ಫೋನ್, ಟಿವಿ, ಲ್ಯಾಪ್‌ಟಾಪ್ ಖರೀದಿಗೆ ಹೆಚ್ಚುವರಿ ಹಬ್ಬದ ಡಿಸ್ಕೌಂಟ್ ಕೊಡುಗೆ ದೊರೆಯಲಿದೆ ಎಂದು ಎಂಐ ಹೇಳಿದೆ.

ಉಳಿದಂತೆ ವಿಸ್ತೃತ ವಾರಂಟಿ, ವಿವಿಧ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್, ವ್ಯಾಲೆಟ್ ಕ್ಯಾಶ್‌ಬ್ಯಾಕ್ ಕೊಡುಗೆಗಳು ಕೂಡ ದೊರೆಯಲಿದೆ ಎಂದು ಶಓಮಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT