ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದ ಯೂಟ್ಯೂಬ್!

ಜನಪ್ರಿಯ ಸ್ಟ್ರೀಮಿಂಗ್ ತಾಣ ಗೂಗಲ್‌ ಕಂಪನಿಯ ‘ಯೂಟ್ಯೂಬ್’ ತನ್ನ ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಇದೇ ಮೊದಲ ಬಾರಿಗೆ ಏರಿಕೆ ಮಾಡಿದೆ.
Published : 28 ಆಗಸ್ಟ್ 2024, 11:20 IST
Last Updated : 28 ಆಗಸ್ಟ್ 2024, 11:20 IST
ಫಾಲೋ ಮಾಡಿ
Comments

ಬೆಂಗಳೂರು: ಜನಪ್ರಿಯ ಸ್ಟ್ರೀಮಿಂಗ್ ತಾಣ ಗೂಗಲ್‌ ಕಂಪನಿಯ ‘ಯೂಟ್ಯೂಬ್’ ಭಾರತದಲ್ಲಿ ತನ್ನ ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಇದೇ ಮೊದಲ ಬಾರಿಗೆ ಏರಿಕೆ ಮಾಡಿದೆ.

ಗರಿಷ್ಠ ಶೇ 15 ರವರಗೆ ಶುಲ್ಕ ಏರಿಕೆ ಕಂಡಿದೆ.

ಈ ಮೊದಲು ₹129 ಇದ್ದ ಪ್ರೀಮಿಯಂ ಮಾಸಿಕ ಶುಲ್ಕ ಈಗ ₹149ಕ್ಕೆ ಹೆಚ್ಚಳವಾಗಿದೆ. ಅಂದರೆ ಶೇ 15.50 ಏರಿಕೆ ಕಂಡಿದೆ.

2019 ರಲ್ಲಿ ಯೂಟ್ಯೂಬ್ ಭಾರತದಲ್ಲಿ ಪ್ರೀಮಿಯಂ ಆವೃತ್ತಿಗಳನ್ನು ಪರಿಚಯಿಸಿತ್ತು. ಆಗ ಮಾಸಿಕ ₹129ದಿಂದ ಶುರುವಾಗಿತ್ತು. ಫ್ಯಾಮಿಲಿ ಪ್ಯಾಕ್ ₹189 ರಿಂದ ₹299ಕ್ಕೆ ಹೆಚ್ಚಿಸಲಾಗಿದೆ.

ಜಾಹೀರಾತು ಮುಕ್ತ ವಿಡಿಯೊ ವೀಕ್ಷಣೆ ಸೇರಿದಂತೆ ಇತರ ಹಲವು ಫೀಚರ್‌ಗಳನ್ನು ಪ್ರೀಮಿಯಂ ಚಂದಾದಾರರಿಗೆ ಯೂಟ್ಯೂಬ್ ಒದಗಿಸುತ್ತದೆ. ಈ ಕುರಿತು ಬಿಸಿನೆಸ್ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ಶುಲ್ಕ ಹೆಚ್ಚಳದ ವಿವರ ಇಲ್ಲಿದೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT