ಎಲ್ಇಡಿ ಬಲ್ಬ್ಗಳಿಂದ ದೇಶದಲ್ಲಿ ಜನಪ್ರಿಯತೆ ಗಳಿಸಿರುವ ಕಂಪನಿಯು ಇದೀಗ ಸಿಸ್ಕಾ ಅಕ್ಸೆಸರೀಸ್ ಹೆಸರಿನಲ್ಲಿ ಸ್ಮಾರ್ಟ್ ವೇರೆಬಲ್ಸ್, ಪವರ್ ಬ್ಯಾಂಕ್, ಚಾರ್ಜರ್ ಉತ್ಪನ್ನಗಳ ವಹಿವಾಟನ್ನೂ ನಡೆಸುತ್ತಿದೆ. ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ಸಿಸ್ಕಾ ಎಸ್ಡಬ್ಲ್ಯು 100 ಸ್ಮಾರ್ಟ್ವಾಚ್, ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ.

ಮನೆಯಲ್ಲಿ ವರ್ಕೌಟ್ ಮಾಡುವಾಗ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಗಮನ ನೀಡಲು ಇದು ಉಪಯುಕ್ತವಾಗಿದೆ. ಫ್ಲಿಪ್ಕಾರ್ಟ್ನಲ್ಲಿ ಇದರ ಬೆಲೆ ₹ 2,499 ಇದೆ. ಇದರ ಜತೆಗೆ, ಮ್ಯಾಗ್ನೆಟಿಕ್ ಚಾರ್ಜಿಂಗ್ನ ಒಂದು ಯುಎಸ್ಬಿ ಚಾರ್ಜಿಂಗ್ ಕೇಬಲ್ ನೀಡಲಾಗಿದೆ.

ಕನೆಕ್ಟ್ ಮಾಡುವುದು ಹೇಗೆ?
ಸ್ಮಾರ್ಟ್ ವಾಚ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಆನ್ ಆಗುತ್ತದೆ. ಆ ಬಳಿಕ ಮೊಬೈಲ್ನಲ್ಲಿ ಪ್ಲೇ ಸ್ಟೋರ್ನಿಂದ ಸಿಸ್ಕಾ ಫಿಟ್ ಆ್ಯಪ್ ಡೌನ್ಲೋಡ್ ಮಾಡಬೇಕು. ಇ–ಮೇಲ್ ಐಡಿ ಕೊಟ್ಟು ಹೊಸ ಪಾಸ್ವರ್ಡ್ನೊಂದಿಗೆ ರಿಜಿಸ್ಟರ್ ಆಗಿ. ಬಳಿಕ ಮೊಬೈಲ್ನ ಬ್ಲೂಟೂತ್ ಆನ್ ಮಾಡಿ ಪೇರ್ ಆಯ್ಕೆ ಕ್ಲಿಕ್ ಮಾಡಿದಾಗ SYSKA SW100 ಎಂದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಆ್ಯಪ್ ಮತ್ತು ವಾಚ್ ಮಧ್ಯೆ ಸಂಪರ್ಕ ಏರ್ಪಡುತ್ತದೆ.

ಈ ಸ್ಮಾರ್ಟ್ವಾಚ್ 1.3 ಇಂಚ್ ಟಿಎಫ್ಟಿ ಎಲ್ಸಿಡಿ ಡಿಸ್ಪ್ಲೇ ಹೊಂದಿದ್ದು, ರೆಸೊಲ್ಯೂಷನ್ 240X240 ಪಿಕ್ಸೆಲ್ ಇದೆ. ಸ್ಮಾರ್ಟ್ಫೋನ್ ಜತೆ ಸಂಪರ್ಕಿಸಲು ವಿ4.2 ಬ್ಲೂಟೂತ್ ನೀಡಲಾಗಿದೆ. 210 ಎಂಎಎಚ್ ಬ್ಯಾಟರಿ ಹೊಂದಿದ್ದು, ಕಂಪನಿ ಹೇಳುವ ಪ್ರಕಾರ 2.5 ಗಂಟೆ ಪೂರ್ತಿ ಚಾರ್ಜ್ ಮಾಡಿದರೆ 15 ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಆದರೆ, ವ್ಯಕ್ತಿಗತವಾಗಿ ಎಷ್ಟು ಚಟುವಟಿಕೆಗಳ ಮೇಲೆ ನಿಗಾ ವಹಿಸಲು ವಾಚ್ ಅನ್ನು ಬಳಸುತ್ತಾರೆ ಎನ್ನುವುದರ ಮೇಲೆ ಬ್ಯಾಟರಿ ಬಾಳಿಕೆ ಅವಧಿ ವ್ಯತ್ಯಾಸವಾಗುತ್ತದೆ.

ಸುರಕ್ಷತೆ ಬಗ್ಗೆ ಹೇಳುವುದಾದರೆ, ಐಪಿ68 ರೇಟಿಂಗ್ಸ್ ಇದ್ದು, 1.5 ಮೀಟರ್ಸ್ ಆಳದ ನೀರಿಗೆ ಬಿದ್ದರೂ ಹಾಳಾಗುವುದಿಲ್ಲ.31 ಗ್ರಾಂ ತೂಕ ಇದ್ದು, ವಾಚ್ನ ಡಯಲ್ ಮತ್ತು ಬೆಲ್ಟ್ ವಿನ್ಯಾಸದ ದೃಷ್ಟಿಯಿಂದಲೂ ಹೆಚ್ಚು ಕಂಫರ್ಟ್ ಆಗಿದೆ.

ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೇವೆ, ಓಡಿದ್ದೇವೆ, ಎಷ್ಟು ಕ್ಯಾಲರಿ ಬರ್ನ್ ಆಗಿದೆ, ಹೃದಯ ಬಡಿತ, ಯೋಗಾಭ್ಯಾಸದ ಮೇಲೆ ನಿಗಾ ಇಡುತ್ತದೆ. ಒಂದೇ ಕಡೆ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ಕೂತಿದ್ದರೆ ನಡೆದಾಡುವಂತೆ ಎಚ್ಚರಿಕೆ ನೀಡುತ್ತದೆ. ಉಚ್ಛ್ವಾಸ ಮತ್ತು ನಿಶ್ವಾಸದ ಮೇಲೆ ಗಮನವಿಡಲು ನೆರವಾಗುತ್ತದೆ. ಸೈಕ್ಲಿಂಗ್, ವೇಟ್ ಲಿಫ್ಟಿಂಗ್, ರನ್ನಿಂಗ್ ನಂತಹ ಕ್ರೀಡಾ ಚಟುವಟಿಕೆಗಳ ಮೇಲೆಯೂ ನಿಗಾ ಇಡಬಲ್ಲದು.

ಕಂಪನಿಯೇ ನೀಡಿರುವ ಐದು ವಾಲ್ಪೇಪರ್ಗಳ ಹೊರತಾಗಿ, ಫೋನ್ ಗ್ಯಾಲರಿಯ ಫೋಟೊ ಬಳಸಬಹುದು. ಅಷ್ಟೇ ಅಲ್ಲದೆ, ಆ್ಯಪ್ ಮೂಲಕ ಹೊಸದಾಗಿ ಚಿತ್ರ ತೆಗೆದು ಬಳಸುವ ಸೌಲಭ್ಯವೂ ಇದೆ.

ಇದರಲ್ಲಿ ಹಿಂದಕ್ಕೆ ಹೋಗುವ ಅಂದರೆ ಬ್ಯಾಕ್ವರ್ಡ್ ಆಯ್ಕೆ ಇಲ್ಲದೇ ಇರುವುದು ಕೊರತೆ. ಉದಾಹರಣೆಗೆ, ಎಷ್ಟು ಹೆಜ್ಜೆ ನಡೆದಿದ್ದೀರಿ ಎಂದು ತಿಳಿದ ಬಳಿಕ ಹೃದಯದ ಬಡಿತದ ಬಗ್ಗೆ ತಿಳಿಯುವ ಆಯ್ಕೆ ಇದೆ. ಆದರೆ, ಮತ್ತೆ ಹಿಂದಕ್ಕೆ ಹೋಗಿ ಎಷ್ಟು ಹೆಜ್ಜೆ ನಡೆದಿದ್ದೆ ಎನ್ನುವುದನ್ನು ನೋಡಲು ಸಾಧ್ಯವಿಲ್ಲ. ಹಾಗೆ ಮಾಡಲು ಮುಂದಿನ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿದ ಬಳಿಕವೇ ಮೊದಲಿನ ಆಯ್ಕೆ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.