ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ 40 ಉಪಗ್ರಹ ಉಡಾವಣೆ ಯೋಜನೆ ಹೊಂದಿದೆ ಚೀನಾ

ಏಳು ವಾಣಿಜ್ಯ ಉಡಾವಣೆಯ ಮೂಲಕ ಸರ್ಕಾರೇತರ ಸಂಸ್ಥೆಗಳ ಉಪಗ್ರಹಗಳನ್ನು ಕೂಡ ಚೀನಾ ಕಕ್ಷೆಗೆ ಉಡಾಯಿಸಲಿದೆ.
Last Updated 25 ಫೆಬ್ರುವರಿ 2021, 8:02 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾ ಈ ವರ್ಷ 40ಕ್ಕೂ ಅಧಿಕ ವಿವಿಧ ಬಾಹ್ಯಾಕಾಶ ಉಪಗ್ರಹ ಉಡಾವಣಾ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ವರದಿ ಹೇಳಿದೆ.

ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಈ ಕುರಿತು ವರದಿ ಮಾಡಿದ್ದು, ಚೀನಾ ಏರೋಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜಿ ಕಾರ್ಪ್ (CASC) ಕಳೆದ ವರ್ಷ 39 ಯೋಜನೆಗಳನ್ನು ಹಮ್ಮಿಕೊಂಡಿತ್ತು, ಆದರೆ ಈ ವರ್ಷ ಅದಕ್ಕೂ ಹೆಚ್ಚಿನ ಯೋಜನೆಗಳು ಇರಲಿವೆ ಎಂದು ಹೇಳಿದೆ.

ಚೀನಾದ ಮೊದಲ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡುವುದು ಸಿಎಎಸ್‌ಸಿಯ ಮೊದಲ ಆದ್ಯತೆ ಎಂದು ಸಂಸ್ಥೆ ಹೇಳಿದ್ದು, ಇದೇ ವರ್ಷ ಅದಕ್ಕೆ ಪೂರಕವಾದ ಬಿಡಿಭಾಗಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗುವುದು ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.

ಅಲ್ಲದೆ, ಇತರ ಏಳು ವಾಣಿಜ್ಯ ಉಡಾವಣೆಗಳನ್ನು ಕೂಡ ಚೀನಾ ಕೈಗೊಳ್ಳುತ್ತಿದ್ದು, ಬಾಹ್ಯಾಕಾಶಕ್ಕೆ ಲಘು ಉಪಗ್ರಹಗಳನ್ನು ಕಳುಹಿಸಲು ಬಯಸುವ ಸಂಸ್ಥೆಗಳು ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಗ್ಲೋಬಲ್ ಟೈಮ್ಸ್ ಸಿಎಎಸ್‌ಸಿಯನ್ನು ಆಧರಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT