ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜೆಂಟಿನಾದಲ್ಲಿ 20 ಲಕ್ಷ ವರ್ಷಗಳ ಹಿಂದಿನ ಕಪ್ಪೆ ಪಳೆಯುಳಿಕೆ ಪತ್ತೆ

Last Updated 9 ಜೂನ್ 2020, 6:40 IST
ಅಕ್ಷರ ಗಾತ್ರ

ಬ್ಯುನೋಸ್‌ ಐರಿಸ್‌: ಅಪರೂಪದ ಪುರಾತನ ಕಪ್ಪೆ ಪ್ರಭೇದದ ಪಳೆಯುಳಿಕೆಯನ್ನು ಅರ್ಜೆಂಟಿನಾದ ಸಂಶೋಧಕರು ಪತ್ತೆ ಮಾಡಿದ್ದಾರೆ. ಸುಮಾರು 20 ಲಕ್ಷ ವರ್ಷಗಳ ಹಿಂದೆ ಬದುಕಿದ್ದಿರಬಹುದಾದ ಕಪ್ಪೆ ಪತ್ತೆಯಾಗಿರುವುದಾಗಿ ಲಾ ಮತಾಂಜಾ ನ್ಯಾಷನಲ್‌ ಯೂನಿವರ್ಸಿಟಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಸೋಮವಾರ ಹೇಳಿದೆ.

'ಪ್ರಾಚೀನ ಕಪ್ಪೆ ಮತ್ತು ಕಾಡುಗಪ್ಪೆಗಳ ಕುರಿತು ಬಹಳ ಕಡಿಮೆ ಮಾಹಿತಿ ತಿಳಿಯಲಾಗಿದೆ' ಎಂದು ನ್ಯಾಚುರಲ್‌ ಸೈನ್ಸ್ ಮ್ಯೂಸಿಯಂನ ಸಂಶೋಧಕ ಫೆಡೆರಿಕೊ ಆ್ಯಗ್ನೊಲಿನ್‌ ಹೇಳಿದ್ದಾರೆ. ಕಪ್ಪೆಗಳು ವಾತಾವರಣ ಹಾಗೂ ಪರಿಸರದಲ್ಲಿನ ಬದಲಾವಣೆಯ ಪ್ರಭಾವಕ್ಕೆ ಬಹುಬೇಗ ಒಳಗಾಗುತ್ತವೆ. ಹಾಗಾಗಿ, ಹಿಂದಿನ ವಾತಾವರಣದ ಬಗ್ಗೆ ಅಧ್ಯಯ ನಡೆಸಲು ಪ್ರಾಚೀನ ಕಪ್ಪೆಗಳು ಪ್ರಮುಖ ಮೂಲಗಳಾಗಿವೆ ಎಂದಿದ್ದಾರೆ.

ಅರ್ಜೆಂಟಿನಾದ ರಾಜಧಾನಿ ಬ್ಯುನೋಸ್‌ ಐರಿಸ್‌ ಉತ್ತರಕ್ಕೆ 180 ಕಿ.ಮೀ. ದೂರದಲ್ಲಿರುವ ಸ್ಯಾನ್‌ ಪೆಡ್ರೊದಲ್ಲಿ ಬಾವಿ ತೋಡುವ ಸಮಯದಲ್ಲಿ 144 ಅಡಿ ಆಳದಲ್ಲಿ ಕಪ್ಪೆಯ ಪಳೆಯುಳಿಕೆ ಪತ್ತೆಯಾಗಿದೆ.

ಪಳೆಯುಳಿಕೆಯಲ್ಲಿ ಉಭಯವಾಸಿ ಜೀವಿಯ ಪುಟ್ಟ ತೋಳಿನ ಮೂಳೆ ದೊರೆತಿದ್ದು, ಮರಗಪ್ಪೆ ಮತ್ತು ಕೊಂಬು ಕಪ್ಪೆಗಳಿಗಿಂತ ಭಿನ್ನವಾಗಿರುವುದಾಗಿ ಆ್ಯಂಗೊಲಿನ್‌ ಹೇಳಿದ್ದಾರೆ.

ಗಾತ್ರವನ್ನು ಹೊರತು ಪಡಿಸಿ, ಕಪ್ಪೆಯ ಪಳೆಯುಳಿಕೆ ಎಂದು ಗುರುತಿಸಲು ಸಾಧ್ಯವಾಗಿರುವುದು ಬಾಲವಿರದ ಲಕ್ಷಣದಿಂದಾಗಿ (ಅನುರಾಸ್). ಅನುರಾಸ್‌ ಗುಂಪಿಗೆ ಬಾಲವಿರದ ಕಪ್ಪೆಗಳು ಸೇರುತ್ತವೆ. ಇವುಗಳ ಕೈತೋಳಿನ ಮೂಳೆಗಳು ಭಿನ್ನ ರಚನೆಯನ್ನು ಹೊಂದಿರುತ್ತವೆ. ಇದರಿಂದಲೇ ಕಪ್ಪೆಗಳು ಚುರುಕಾಗಿ ಜಿಗಿದು ಕುಪ್ಪಳಿಸಿ ಸಾಗಲು ಅನುವಾಗಿದೆ.

50 ಲಕ್ಷ ವರ್ಷಗಳಿಂದ 25 ಲಕ್ಷ ವರ್ಷಗಳ ಹಿಂದಿನ ಪ್ಲಿಯೊಸಿನ್‌ ಯುಗ ಅಂತ್ಯದ ಹಾಗೂ ಪ್ಲಿಸ್ಟೊಸಿನ್ ಯುಗ ಆರಂಭದ ಕಾಲಕ್ಕೆ ಸೇರಿದ ಜೀವಿಗಳ ಪಳೆಯುಳಿಕೆಯು ಅರ್ಜೆಂಟಿನಾ ಪಳೆಯುಳಿಕೆ ತಜ್ಞರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದಂತಾಗಿದೆ. ಪ್ಲಿಸ್ಟೊಸೀನ್‌ ಭೂವಿಜ್ಞಾನದ ಯುಗದ ಆರಂಭ 26 ಲಕ್ಷ ವರ್ಷಗಳ ಹಿಂದಿನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT