ಮಂಗಳವಾರ, ಮೇ 24, 2022
25 °C

ನಾಸಾ: ಚಂದ್ರಯಾನ ರಾಕೆಟ್‌ನಲ್ಲಿ ಇಂಧನ ಸೋರಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಫ್ಲೋರಿಡಾ (ಎಪಿ): ಚಂದ್ರನಲ್ಲಿಗೆ ಮನುಷ್ಯರನ್ನು ಕರೆದೊಯ್ಯುವ ಎರಡನೇ ಪ್ರಯತ್ನಕ್ಕೆ ಪೂರ್ವಭಾವಿಯಾಗಿ ಇದೇ ಜೂನ್‌ನಲ್ಲಿ ಖಾಲಿ ರಾಕೆಟ್‌ ಅನ್ನು ಉಡಾಯಿಸುವ ಸಲುವಾಗಿ ರಾಕೆಟ್‌ಗೆ ಇಂಧನ ಭರ್ತಿ ಮಾಡುವ ಕೆಲಸವನ್ನು ‘ನಾಸಾ’ ಆರಂಭಿಸಿದ್ದು, ಇಂಧನ ಸೋರಿಕೆಯಾಗುತ್ತಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ.

ರಾಕೆಟ್‌ಗೆ ಇಂಧನ ತುಂಬಿಸುವ ಬಹುಮುಖ್ಯವಾದ ಹಂತದಲ್ಲಿ ಈ ಸೋರಿಕೆ ಕಂಡುಬಂದಿದೆ. 322 ಅಡಿ ಎತ್ತರದ (98 ಮೀಟರ್) ಎಸ್‌ಎಲ್‌ಎಸ್ ರಾಕೆಟ್‌ನಲ್ಲಿ 30 ಮಹಡಿಗಳಿದ್ದು, ಕೊನೆಯಲ್ಲಿ ಖಾಲಿ ಓರಿಯನ್‌ ಕೋಶ ಇರಲಿದೆ. ನಾಲ್ಕರಿಂದ ಆರು ವಾರಗಳ ಪಯಣದಲ್ಲಿ ಅದು ಚಂದ್ರನಲ್ಲಿಗೆ ತೆರಳಿ ಭೂಮಿಗೆ ಮರಳಲಿದೆ.

ಈ ಯೋಜನೆಯ ಫಲಶ್ರುತಿಯ ಆಧಾರದಲ್ಲಿ 2024ರಲ್ಲಿ ಗಗನಯಾನಿಗಳು ಮೊದಲಿಗೆ ಚಂದ್ರನ ಕಕ್ಷೆಗೆ ತೆರಳಲಿದ್ದು, 2025ರಲ್ಲಿ ಚಂದ್ರನ ನೆಲದ ಮೇಲೆ ಮತ್ತೆ ಪದಾರ್ಪಣೆ ಮಾಡುವ ಯೋಜನೆ ಸಿದ್ಧವಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು