ಬುಧವಾರ, ಡಿಸೆಂಬರ್ 2, 2020
17 °C

ಕೃಷಿ ಸಂಪನ್ಮೂಲಗಳಿಂದ ‘ಔಷಧ’ಗಳ ಅಭಿವೃದ್ಧಿ: ಗುವಾಹಟಿ ಐಐಟಿ ಸಂಶೋಧಕರ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ) ಸಂಶೋಧಕರು ಕೃಷಿ ಸಂಪನ್ಮೂಲ ಗಳನ್ನು ಉಪಯೋಗಿಸಿಕೊಂಡು ಕಡಿಮೆ ವೆಚ್ಚದ ಮೆಂಬ್ರೇನ್‌ ಟೆಕ್ನಾಲಜಿಯೊಂದಿಗೆ ಮಾನಸಿಕ ರೋಗಕ್ಕೆ (ಸೈಕೊಆಕ್ಟೀವ್‌ ಡ್ರಗ್ಸ್) ಸಂಬಂಧಿಸಿದ ಔಷಧ ಹಾಗೂ ವಯಸ್ಸು ಮರೆ ಮಾಚುವ(ಆಂಟಿ ಏಜಿಂಗ್‌ ಕಾಂಪೌಂಡ್ಸ್‌) ಸಂಯುಕ್ತಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ನಿಂಬೆ ಜಾತಿಯ ಹಣ್ಣುಗಳು ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆ, ರಸಭರಿತ ಹಣ್ಣುಗಳು, ಪರಿಮಳ ಸೂಸುವ ಗಿಡಗಳು(ಕೊತ್ತಂಬರಿ, ಅಜುವಾನ), ದ್ವಿದಳ ಧಾನ್ಯ, ಟೀ, ಸಮುದ್ರದ ಮುಳ್ಳು(ಸೀ ಬುಕ್ತ್ರೋನ್) ಮತ್ತು ಈರುಳ್ಳಿಯಂತಹ ಕೃಷಿ ಸಂಪನ್ಮೂಲಗಳನ್ನು ಬಳಸಿಕೊಂಡು ಈ ಔಷಧ ಮತ್ತು ಸಂಯುಕ್ತಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ತಂತ್ರಜ್ಞಾನವನ್ನು ಐಐಟಿಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಪರಿಸರ ಕೇಂದ್ರದ ಮುಖ್ಯಸ್ಥ ಮಿಹಿರ್ ಕುಮಾರ್ ಅವರು, ಎಂ.ಟೆಕ್ ವಿದ್ಯಾರ್ಥಿ ವಿ.ಎಲ್‌.ಧಡ್ಗೆ ಅವರೊಂದಿಗೆ ಅಭಿವೃದ್ಧಿಪಡಿಸಿದ್ದು, ಪೇಟೆಂಟ್ ಕೂಡ ಮಾಡಿಸಿದ್ದಾರೆ. ಈ ಔಷಧಗಳಿಗೆ ಯಾವುದೇ ಸಾವಯವ ದ್ರಾವಣವನ್ನು ಉಪಯೋಗಿಸಿಲ್ಲ.

‘ಸೈಕೋಆಕ್ಟೀವ್‌ (ಕೆಫೀನ್) ಔಷಧಗಳಲ್ಲಿ ಆರೋಗ್ಯ ಸಂಬಂಧಿ ಉಪಯೋಗಗಳಿವೆ. ಆಂಟಿ ಏಜಿಂಗ್ ಕಾಂಪೌಂಡ್ಸ್‌ (ಫ್ಲೆವೊನಾಯ್ಡ್) ದೇಹದ ಕಿಣ್ವಗಳಲ್ಲಿನ ನಂಜು ತೆಗೆವ ಪ್ರಕ್ರಿಯೆಯನ್ನು ಉತ್ತೇಜಿಸುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುವಂತಹ ವಸ್ತುಗಳಿರುವ ಕಾರಣ ಫ್ಲೆವೊನಾಯ್ಡ್‌ ಸಂಯುಕ್ತಗಳು ಔಷಧೀಯ ಕ್ಷೇತ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಸಂಯುಕ್ತಗಳಲ್ಲಿರುವ ಕೆಲವು ಅಂಶಗಳು ಬಿದಿರಿನ ಎಲೆಗಳು, ದ್ರಾಕ್ಷಿ, ಸೇಬು ಮತ್ತು ಇತರೆ ನೈಸರ್ಗಿಕ ಮೂಲಗಳಲ್ಲೂ ಲಭ್ಯವಿವೆ‘ ಎಂದು ಪುರ್ಕೈಟ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.