’ಸೊಳ್ಳೆ ಹೊಡೆಯಲು ರಿವಾಲ್ವರ್ ಏಕೆ’ – ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ನ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರ ಈ ಮಾತು ಕಳೆದ ವಾರ ಭಾರೀ ಸುದ್ದಿಯಲ್ಲಿತ್ತು. ಅದು ಜಗತ್ತಿಗೆ ಭಾರತದ ತಾಕತ್ತು ಏನು ಎಂಬುದರ ಪ್ರತಿಧ್ವನಿಯ ಜತೆಗೆ, ಹೊಸ ತಂತ್ರಜ್ಞಾನ ಆವಿಷ್ಕಾರದ ಕನಸಿನಲ್ಲಿರುವ ಬಹಳಷ್ಟು ಸ್ಟಾರ್ಟ್ಅಪ್ಗಳಿಗೆ ಇದು ಭರವಸೆಯ ಬೆಳಕಾಗಿದೆ.

ಚೀನಾದ ‘ಡೀಪ್ ಸೀಕ್’ ಎಂಬ ಅಗ್ಗದ ಕೃತಕ ಬುದ್ಧಿಮತ್ತೆ ಅಮೆರಿಕದ ದೈತ್ಯ ಹಾರ್ಡ್ವೇರ್ ಕಂಪನಿ ಎನ್ವಿಡಿಯಾದ ಷೇರುಗಳನ್ನೇ ಕುಸಿಯುವಂತೆ ಮಾಡಿತು. ಕೃತಕ ಬುದ್ಧಿಮತ್ತೆ ಸಿದ್ಧಪಡಿಸಬೇಕೆಂದರೆ ದುಬಾರಿ ಬೆಲೆಯ ಹಾರ್ಡ್ವೇರ್ ಬೇಕು ಎಂಬ ನಂಬಿಕೆಯನ್ನೇ ಇದು ಹುಸಿಗೊಳಿಸಿತು. ಇದೀಗ ಭಾರತದಿಂದ ಹೊರಹೊಮ್ಮಿದ ಈ ಸುದ್ದಿಯ ಮೂಲಕವೂ ಅಂಥದ್ದೇ ಒಂದು ಸಂದೇಶ ಜಗತ್ತಿಗೆ ರವಾನೆಯಾಗಿದೆ.

ದುಬಾರಿ ಗ್ರಾಫಿಕ್ಸ್ ಪ್ರೊಸೆಸ್ಸಿಂಗ್ ಯೂನಿಟ್ (ಜಿಪಿಯು) ಬದಲು, ಸೆಂಟ್ರಲ್ ಪ್ರೊಸೆಸ್ಸಿಂಗ್ ಯೂನಿಟ್ (ಸಿಪಿಯು) ಬಳಸಿಯೂ ಮೆಟಾದ ಲಾಮಾ 2 ಅಥವಾ ಅಲಿಬಾಬಾದ ಖ್ವೆನ್ 2.5ನಂಥ ಬೃಹತ್ ಕೃತಕಮತ್ತೆ ತಂತ್ರಾಂಶಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ ಎಂದು ಐಐಟಿ ಮದ್ರಾಸ್ನ ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದ ಸ್ಟಾರ್ಟ್ಅಪ್ ಝೀರೊ ಲ್ಯಾಬ್ಸ್ ತಂತ್ರಜ್ಞರ ತಂಡ ಸಾಬೀತು ಮಾಡಿದೆ.

‘ಕಾಂಪ್ಯಾಕ್ಟ್ ಎಐ’ ಎಂಬ ಈ ಸರಳ ಸಿಪಿಯು ಆಧಾರಿತ ಕಂಪ್ಯೂಟರ್ ಮೂಲಕ ಕೃತಕ ಬುದ್ಧಿಮತ್ತೆಯನ್ನು ಅನಾಯಾಸವಾಗಿ ಬಳಸುವ ತಂತ್ರಜ್ಞಾನ ಸುದ್ದಿ ಹೊರಬೀಳುತ್ತಿದ್ದಂತೆ ಇಡೀ ಜಗತ್ತು ಭಾರತದತ್ತ ನೋಡಲಾರಂಭಿಸಿದೆ. ಈ ಮೊದಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಸಾಧನ ಅಭಿವೃದ್ಧಿಪಡಿಸಬೇಕೆಂದರೆ ದುಬಾರಿ ಬೆಲೆಯ ಜಿಪಿಯು ಖರೀದಿಸಬೇಕು. ಅದಕ್ಕಾಗಿ ಹಲವು ದಿನಗಳು ಕಾಯಬೇಕಾಗಿತ್ತು. ಚಿಪ್ ಅಲಭ್ಯತೆಯಿಂದಾಗಿ ಬಹಳಷ್ಟು ಸಂಶೋಧನೆಗಳು ವೇಗ ಪಡೆಯಲಾಗದೆ ಪರಿತಪಿಸುವಂತಾಗಿತ್ತು. ಚೀನಾದ ಡೀಪ್ಸೀಕ್ ಕೂಡ ಅಗ್ಗದ ಬೆಲೆಯ ಕೆಲ ಚಿಪ್ಗಳನ್ನೇ ಜೋಡಿಸಿ ಯಶಸ್ಸು ಸಾಧಿಸಿದ್ದು ಭಾರೀ ಸದ್ದು ಮಾಡಿತ್ತು. ಇದೀಗ ಕಾಂಪ್ಯಾಕ್ಟ್ ಕೂಡ ಅಂಥದ್ದೇ ಹೊಸ ಸಾಧ್ಯತೆಯನ್ನು ತಂತ್ರಜ್ಞಾನ ಜಗತ್ತಿಗೆ ಪರಿಚಯಿಸಿದೆ.

ಸಿಪಿಯು ಬಳಸಿ ಕೃತಕ ಬುದ್ಧಿಮತ್ತೆಯ ತಂತ್ರಾಂಶದಿಂದ ಉತ್ಕೃಷ್ಟ ಗುಣಮಟ್ಟದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿದೆ ಎಂದು ಎರಡೂ ಸಂಸ್ಥೆಗಳು ಹೇಳಿವೆ. ಈ ತಂತ್ರಜ್ಞಾನವನ್ನು ಚಿಪ್ ತಯಾರಿಕಾ ಕಂಪನಿಗಳಾದ ಇಂಟೆಲ್ ಮತ್ತು ಅಡ್ವಾನ್ಸ್ಡ್ ಮೈಕ್ರೊ ಡಿವೈಸ್ ಕಂಪನಿಗಳೂ ಪ್ರಯೋಗಾರ್ಥವಾಗಿ ಪರೀಕ್ಷಿಸಿವೆ ಎಂದು ಝೀರೊ ಹೇಳಿದೆ.

‘ಕೃತಕ ಬುದ್ಧಿಮತ್ತೆ ಎಂಬ ಪದವೇ ನಮ್ಮಲ್ಲಿ ತಾರತಮ್ಯ ಭಾವನೆ ಮೂಡಿಸಿತ್ತು. ಉಳ್ಳವರು ಮಾತ್ರ ದುಬಾರಿ ಬೆಲೆಯ ಜಿಪಿಯು ಬಳಸಿ ಶಕ್ತಿಶಾಲಿ ಎಐಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂಬ ಮಾತುಗಳಿದ್ದವು. ಆದರೆ ಸೊಳ್ಳೆ ಸಾಯಿಸಲು ರಿವಾಲ್ವರ್ ಬೇಡ ಎಂಬುದನ್ನು ಪ್ರಯೋಗ ಸಹಿತ ಜಗತ್ತಿಗೆ ತೋರಿಸಿದ್ದೀವಿ’ ಎಂದು ವಿ. ಕಾಮಕೋಟಿ ಹೇಳಿದ್ದಾರೆ.

ಈ ಶಕ್ತಿಶಾಲಿ ಕಂಪ್ಯೂಟರ್ನಲ್ಲಿ 24 ಕೋರ್ ಪ್ರಾಸೆಸರ್ಗಳುಳ್ಳ ಇಂಟೆಲ್ನ ಕ್ಸೆನಾನ್ ಸಿಲ್ವರ್ 4510 ಸಿಪಿಯು ಮತ್ತು 46 ಜಿಬಿ ರ್ಯಾಮ್ ಬಳಸಲಾಗಿದೆ. ಇದು ಪ್ರತಿ ಸೆಕೆಂಡ್ಗೆ 43 ವಿವಿಧ ಕೆಲಸಗಳನ್ನು ನಿಭಾಯಿಸಬಲ್ಲಷ್ಟು ಶಕ್ತಿ ಈ ಕಾಂಪ್ಯಾಕ್ಟ್ ಸಿಪಿಯು ಹೊಂದಿದೆ.

‘ಥರ್ಡ್ ಎಐ’ ಎಂಬ ಕಂಪನಿ ಬೋಲ್ಟ್ 2.5ಬಿ ಎಂಬ ಸಿಪಿಯು ಆಧಾರಿತ ಎಐ ಯಂತ್ರವನ್ನು ಅಭಿವೃದ್ಧಿಪಡಿಸಿತ್ತು. ಡೆಸ್ಕ್ಟಾಪ್ ಮಾದರಿಯಾಗಿದ್ದ ಇದು ಪ್ರತಿ ಸೆಕೆಂಡ್ಗೆ 50 ಟೋಕನ್ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿತ್ತು. ಇಂಟೆಲ್ ಮತ್ತು ಆ್ಯಂಪರ್ ಚಿಪ್ ತಯಾರಿಕಾ ಕಂಪನಿಗಳು ತಮ್ಮ ಯಂತ್ರಗಳ ಮೂಲಕವೂ ಕೃತಕಬುದ್ಧಿಮತ್ತೆ ತಂತ್ರಾಂಶಗಳನ್ನು ನಿರ್ವಹಿಸಲು ಸಾಧ್ಯ ಎಂದೂ ಹೇಳಿದ್ದವು.

ಚಂದ್ರಯಾನ, ಮಂಗಳಯಾನ ಸೇರಿದಂತೆ ಕಡಿಮೆ ಖರ್ಚಿನಲ್ಲಿ ಬೃಹತ್ ಸಾಧನೆ ಮಾಡುವ ಭಾರತದ ಪರಂಪರೆ ಈಗ ಕಾಂಪ್ಯಾಕ್ಟ್ವರೆಗೂ ಮುಂದುವರಿದಿದೆ. ಭಾರತದ ಇಂಥ ಆವಿಷ್ಕಾರಗಳು ದೇಶದ ನೂರಾರು ತಂತ್ರಜ್ಞರಿಗೆ ಪ್ರೇರಣೆಯಾಗುವುದರ ಜತೆಗೆ, ಜಗತ್ತನ್ನೇ ಇತ್ತ ನೋಡುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.