ಬೆಂಗಳೂರು: ಜುಲೈ 3ರಂದು ಮಹೇಂದ್ರಗಿರಿಯಲ್ಲಿರುವ ಪ್ರೊಪಲ್ಷನ್ ಕಾಂಪ್ಲೆಕ್ಸ್ನಲ್ಲಿ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ 'ಗಗನಯಾನ'ದ 'ಸರ್ವೀಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್' (ಎಸ್ಎಂಪಿಎಸ್)ನ ಮತ್ತೆ ಎರಡು ಹಾಟ್ ಟೆಸ್ಟ್ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಕ್ರಮವಾಗಿ 30 ಹಾಗೂ 10 ಸೆಕೆಂಡುಗಳ ಕಾಲ ನಡೆದ ಈ ಅಲ್ಪಾವಧಿಯ ಪರೀಕ್ಷೆಗಳು ಒಟ್ಟಾರೆ ಸಂರಚನೆಯ ಕ್ಷಮತೆಯನ್ನು ಹೊಂದಿದ್ದವು ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರೊಪಲ್ಷನ್ ಸಿಸ್ಟಮ್ನ ಹಾಟ್ ಟೆಸ್ಟ್ ವೇಳೆ ಒಟ್ಟಾರೆ ಕಾರ್ಯಕ್ಷಮತೆಯು ಸಹಜವಾಗಿತ್ತು ಎಂದು ಹೇಳಿದೆ.

ಗಗನಯಾನದ ಸರ್ವೀಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ಗಾಗಿ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಂ ಕೇಂದ್ರದಲ್ಲಿ (ಎಲ್ಪಿಎಸ್ಸಿ) ತಂತ್ರಜ್ಞಾನದ ಅಭಿವೃದ್ಧಿ ನಡೆಯುತ್ತಿದೆ. ಈ ಪರೀಕ್ಷೆಗಳ ಯಶಸ್ಸಿನೊಂದಿಗೆ ಸದ್ಯದಲ್ಲೇ ಪೂರ್ಣ ಪ್ರಮಾಣದ ಹಾಟ್ ಟೆಸ್ಟ್ ಅನ್ನು ನಡೆಸಲಾಗುವುದು ಎಂದು ಇಸ್ರೊ ತಿಳಿಸಿದೆ.
.ಅಂತರಿಕ್ಷಯಾನ ವಿಳಂಬ | ಸುರಕ್ಷತೆ, ಯೋಜನೆಯ ಪರಿಪೂರ್ಣತೆಗೆ ಆದ್ಯತೆ: ಇಸ್ರೊ.PHOTOS | ಇಸ್ರೊ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ 100ನೇ ಉಡ್ಡಯನ ಯಶಸ್ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.