ಇದು ಶ್ರೀಹರಿಕೋಟಾದಿಂದ ಇಸ್ರೊದ ಐತಿಹಾಸಿಕ 100ನೇ ಉಡ್ಡಯನ ಆಗಿದೆ.
(ಚಿತ್ರ ಕೃಪೆ: X/@isro)
ADVERTISEMENT
ಆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ನೂತನ ಮೈಲಿಗಲ್ಲು ಸಾಧಿಸಿದೆ.
(ಚಿತ್ರ ಕೃಪೆ: X/@isro)
ಬಳಿಕ ಉಪಗ್ರಹ ನಿಗದಿತ ಕಕ್ಷೆಯನ್ನು ಸೇರಿತು ಎಂದು ಇಸ್ರೊ ಖಚಿತಪಡಿಸಿದೆ.
(ಪಿಟಿಐ ಚಿತ್ರ)
ಈ ವರ್ಷದ ಮೊದಲ ಯೋಜನೆ ಇದಾಗಿದೆ.
(ಪಿಟಿಐ ಚಿತ್ರ)
ಜ.13ರಂದು ಇಸ್ರೊದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ವಿ. ನಾರಾಯಣನ್ ಅವರಿಗೂ ಮೊದಲ ಬಾಹ್ಯಾಕಾಶ ಕಾರ್ಯಕ್ರಮವಾಗಿದೆ.
(ಪಿಟಿಐ ಚಿತ್ರ)
27 ತಾಸಿನ ಕ್ಷಣಗಣನೆಯ ಬಳಿಕ ಇಂದು (ಬುಧವಾರ) ಮುಂಜಾನೆ 6.23ಕ್ಕೆ ಸರಿಯಾಗಿ ಎರಡನೇ ಲ್ಯಾಂಚ್ ಪ್ಯಾಡ್‌ನಿಂದ ರಾಕೆಟ್ ನಭಕ್ಕೆ ಚಿಮ್ಮಿತು ಎಂದು ಇಸ್ರೊ ತಿಳಿಸಿದೆ.
(ಪಿಟಿಐ ಚಿತ್ರ)
2023ರ ಮೇ 29ರಂದು ಎರಡನೇ ತಲೆಮಾರಿನ ಎನ್‌ವಿಎಸ್-01 ನ್ಯಾವಿಗೇಷನ್ ಉಪಗ್ರಹವನ್ನು ಉಡ್ಡಯನ ಮಾಡಲಾಗಿತ್ತು.
(ಪಿಟಿಐ ಚಿತ್ರ)
ಭೂ, ವಾಯುಪ್ರದೇಶ, ಕಡಲಯಾನ, ಕೃಷಿಗೆ ಸಂಬಂಧಿಸಿದ ನಿಖರ ಮಾಹಿತಿ ಒದಗಿಸಲು ಈ ಯೋಜನೆಯಿಂದ ಸಾಧ್ಯವಾಗಲಿದೆ.
(ಪಿಟಿಐ ಚಿತ್ರ)
ಮೊಬೈಲ್ ಸಾಧನಗಳಲ್ಲಿ ಲೊಕೇಷನ್ ಆಧಾರಿತ ಸೇವೆ, ಉಪ್ರಗ್ರಹಗಳ ಕಕ್ಷೆಯ ನಿರ್ಣಯ, ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ತುರ್ತು ಸೇವೆಗಳಿಗೆ ನೆರವಾಗಲಿದೆ ಎಂದು ಇಸ್ರೊ ಮಾಹಿತಿ ನೀಡಿದೆ.