ನವದೆಹಲಿ: ಸಂವಹನ ಉದ್ದೇಶಕ್ಕಾಗಿ ಬಳಸುವ ಉಪಗ್ರಹವನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಸಿದ್ಧತೆ ನಡೆಸಿದೆ.

ಇಸ್ರೊ ಮಹತ್ವಾಕಾಂಕ್ಷೆ ಮಾನವಸಹಿತ ’ಗಗನಯಾನ’ ಯೋಜನೆಗೆ ಮುನ್ನ ಈ ಉಪಗ್ರಹ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಗಗನಯಾನ ಜತೆ ನಿರಂತರ ಸಂಪರ್ಕ ಸಾಧಿಸಲು ಈ ಉಪಗ್ರಹ ನೆರವಾಗಲಿದೆ.

₹800 ಕೋಟಿ ಮೊತ್ತದ ಈ ಯೋಜನೆಗೆ ಅನುಮೋದನೆ ದೊರೆತಿದ್ದು, ಈಗಾಗಲೇ ಕೆಲಸಗಳು ಆರಂಭವಾಗಿವೆ. ಡಿಸೆಂಬರ್ನಲ್ಲಿ ಈ ಉಪಗ್ರಹ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಂವಹನ ಉದ್ದೇಶಕ್ಕಾಗಿ ಬಳಸುವ ಉಪಗ್ರಹವು ಭೂಮಿಯಲ್ಲಿರುವ ಉಪಗ್ರಹ ನಿಗಾ ಕೇಂದ್ರಕ್ಕೆ ಸ್ಪಷ್ಟವಾದ ಮಾಹಿತಿಯನ್ನು ರವಾನಿಸಲು ನೆರವಾಗುತ್ತದೆ. ಬಾಹ್ಯಾಕಾಶ ಯೋಜನೆಗಳಿಗಾಗಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಸಹ ಇಂತಹ ಉಪಗ್ರಹವನ್ನು ಹೊಂದಿದೆ.

ನಿರಂತರವಾಗಿ ಉಪಗ್ರಹಗಳ ಮೇಲೆ ನಿಗಾವಹಿಸಲು ಸಹ ಈ ರೀತಿಯ ಉಪಗ್ರಹಗಳು ಉಪಯೋಗವಾಗುತ್ತವೆ. ಇದರಿಂದ, ಭೂಮಿಯಲ್ಲಿ ಹೆಚ್ಚುವರಿಯಾಗಿ ಉಪಗ್ರಹ ನಿಗಾ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿರುವುದಿಲ್ಲ. ಮಾರಿಷಸ್, ಬ್ರೂನಿ ಮತ್ತು ಇಂಡೊನೇಷ್ಯಾದ ಬಿಯಾಕ್ನಲ್ಲೂ ಇಸ್ರೊ ಈ ರೀತಿಯ ಕೇಂದ್ರಗಳನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಗಗನಯಾನ ಯೋಜನೆಗಾಗಿ ಕೊಕೊ ದ್ವೀಪದಲ್ಲೂ ಉಪಗ್ರಹ ನಿಗಾ ಕೇಂದ್ರವನ್ನು ಸ್ಥಾಪಿಸುವ ಕುರಿತು ಆಸ್ಟ್ರೇಲಿಯಾ ಜತೆ ಮಾತುಕತೆ ನಡೆಸಲಾಗಿದೆ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ಕಳೆದ ತಿಂಗಳು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.