ಶನಿವಾರ, ಮೇ 8, 2021
19 °C

ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’: ಭಾರತದಲ್ಲಿ ಎಷ್ಟು ಗಂಟೆಗೆ ಕಾಣಿಸಲಿದೆ?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Great Conjunction

ನವದೆಹಲಿ: ಗುರು ಮತ್ತು ಶನಿಗ್ರಹಗಳು 400 ವರ್ಷಗಳ ನಂತರ ಇದೇ ಮೊದಲ ಬಾರಿ ಅತ್ಯಂತ ಸಮೀಪದಲ್ಲಿ ಕಾಣಿಸುತ್ತಿವೆ.

ಈ ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಪರಸ್ಪರ ಹಾದುಹೋಗಲಿವೆ. ಶನಿ ಮತ್ತು ಗುರು ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗುತ್ತವೆ. ಆದರೆ, ಈ ಬಾರಿ ಈ ಎರಡೂ ಗ್ರಹಗಳಿಗೆ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗುತ್ತಿರುವುದರಿಂದ ಈ ವಿದ್ಯಮಾನ ಗೋಚರಿಸಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಇದನ್ನು ‘ಮಹಾ ಸಂಯೋಗ’ ಎಂದೂ ಖಗೋಳ ವಿಜ್ಞಾನಿಗಳು ಕರೆದಿದ್ದಾರೆ.

ಉಭಯ ಗ್ರಹಗಳು ಅತ್ಯಂತ ಸಮೀಪದಲ್ಲಿ ಇರುವುದು ಯಾವ್ಯಾವ ದೇಶಗಳ ನಗರಗಳಲ್ಲಿ ಎಷ್ಟು ಗಂಟೆಗೆ ಕಾಣಿಸಲಿದೆ ಎಂಬುದನ್ನು ಗ್ರಹ ಖಗೋಳಶಾಸ್ತ್ರಜ್ಞ ಡಾ. ಜೇಮ್ಸ್ ಒ'ಡೊನೊಘ್ಯೂ ಟ್ವೀಟ್ ಮಾಡಿದ್ದಾರೆ. ಕೆಲವೆಡೆ ನಾಳೆಯೂ (ಮಂಗಳ ವಾರ) ಗೋಚರಿಸಲಿದೆ.

* ಲಾಸ್‌ ಏಂಜಲೀಸ್ 9.43
* ನ್ಯೂಯಾರ್ಕ್‌ 12.43
* ರಿಯೋ ಡಿ ಜನೈರೊ – 2.43
* ಲಂಡನ್ – 5.43
* ಪ್ಯಾರಿಸ್ – 6.43
* ಇಸ್ತಾಂಬುಲ್ – 8.43
* ದುಬೈ – 9.43
* ನವದೆಹಲಿ – 11.13 (ರಾತ್ರಿ)
* ಟೋಕಿಯೊ – 2.43 (ಡಿಸೆಂಬರ್ 22ರ ಮುಂಜಾನೆ)
* ಸಿಡ್ನಿ – 04.43 (ಡಿಸೆಂಬರ್ 22ರ ಮುಂಜಾನೆ)

ಹೇಗೆ ನೋಡಬಹುದು?

ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’ವನ್ನು ಯಾವುದೇ ವಿಶೇಷ ಉಪಕರಣಗಳಿಲ್ಲದೆಯೂ ನೋಡಬಹುದು. ಬಾಲ್ಕನಿ ಅಥವಾ ತಾರಸಿಯ ಮೇಲೆ ನಿಂತು ನೋಡಬಹುದು. ಕ್ಯಾಮರಾ ಇದ್ದರೆ ಉಭಯ ಗ್ರಹಗಳ ಸಾಮೀಪ್ಯವನ್ನು ಸೆರೆಹಿಡಿದಿಟ್ಟುಕೊಳ್ಳಬಹುದು. ಮೊಬೈಲ್‌ ಫೋನ್ ಕ್ಯಾಮರಾ ಮೂಲಕವೂ ಅಪರೂಪದ ವಿದ್ಯಮಾನವನ್ನು ಸೆರೆಹಿಡಿಯಬಹುದು.

ಇನ್ನಷ್ಟು...

ಖಗೋಳವಿಜ್ಞಾನ ಅಪರೂಪದ ವಿದ್ಯಮಾನ: ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’

ಗುರು, ಶನಿ ಗ್ರಹಗಳ ಅಪೂರ್ವ ಸಮಾಗಮ

21ರಂದು ಗುರು, ಶನಿಯ ಸಾಮೀಪ್ಯ ಗೋಚರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು