ಭಾನುವಾರ, ಏಪ್ರಿಲ್ 11, 2021
33 °C
ರೋವರ್ ಕಳುಹಿಸಿದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ

ಮಂಗಳ ಗ್ರಹದಿಂದ ಅದ್ಭುತ ಚಿತ್ರಗಳನ್ನು ರವಾನಿಸಿದ ‘ಪರ್ಸಿವಿಯರೆನ್ಸ್‌‘

ಎಪಿ Updated:

ಅಕ್ಷರ ಗಾತ್ರ : | |

Prajavani

ಕೇಪ್‌ ಕೆನವರೆಲ್ (ಫ್ಲಾರಿಡಾ): ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ಕಳುಹಿಸಿರುವ ಪರ್ಸಿವಿಯರೆನ್ಸ್‌ ರೋವರ್ ಶುಕ್ರವಾರ ಮಂಗಳ ಗ್ರಹದ ಮೇಲೆ ಇಳಿಯುವಾಗ ತೀರಾ ಹತ್ತಿರದಿಂದ ಸೆರೆ ಹಿಡಿದಿರುವ ಅತ್ಯದ್ಭುತ ಚಿತ್ರಗಳನ್ನು ನಾಸಾದ ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ.

ಆ ಚಿತ್ರಗಳಲ್ಲಿ ಕಾಣುತ್ತಿರುವ ಮಂಗಳ ಗ್ರಹದ ಕೆಂಪು ದೂಳಿನ ಮೇಲ್ಮೈ ಪರಿಚಯಿಸುವ ದೃಶ್ಯಗಳು ನಾಸಾ ವಿಜ್ಞಾನಿ ಗಳನ್ನೇ ಮೂಕವಿಸ್ಮಿತರನ್ನಾಗಿಸಿದೆ. ಪರ್ಸಿವಿಯರೆನ್ಸ್ ರೋವರ್‌ ಹೊತ್ತ ನೌಕೆ ಯಶಸ್ವಿಯಾಗಿ ಮಂಗಳ ಗ್ರಹದ ಅಂಗಳವನ್ನು ಸ್ಪರ್ಶಿಸಿದ 24 ಗಂಟೆಗಳ ನಂತರ ರೋವರ್ ಕಳುಹಿಸಿದ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದೆ.

ಈ ರೋವರ್, ಮಂಗಳ ಗ್ರಹದಲ್ಲಿ ಪುರಾತನ ಕಾಲದಲ್ಲಿ ಜೀವಿಗಳು ನೆಲೆಸಿದ್ದವೇ ಎಂಬುದರ ಕುರಿತು ಅಧ್ಯಯನ ನಡೆಸಲು ನೆರವಾಗಲಿದೆ.  ಭೂಮಿಗೆ ಮರಳಲು ಅಧ್ಯಯನಕ್ಕಾಗಿ ಶಿಲಾ ಮಾದರಿಗಳನ್ನು ಅದು ಸಂಗ್ರಹಿಸಿ ತರಲಿದೆ.

ಇದನ್ನೂ ನೋಡಿ... 

ನಾಸಾ ಕಳುಹಿಸಿರುವ ವಿಶೇಷ ನೌಕೆಯಲ್ಲಿ 25 ಕ್ಯಾಮೆರಾ ಮತ್ತು ಎರಡು ಮೈಕ್ರೋಫೋನ್‌ಗಳನ್ನು ಜೋಡಿಸಲಾಗಿದ್ದು, ಇದರಲ್ಲಿ ಕೆಲವನ್ನು, ನೌಕೆ ಗ್ರಹದ ಮೇಲೆ ಇಳಿಯುವಾಗ ಚಾಲನೆಯಲ್ಲಿಡಲಾಗಿತ್ತು.

ರೋವರ್ ಕಳುಹಿಸಿರುವ ಚಿತ್ರಗಳಲ್ಲಿ ನೌಕೆ ಮಂಗಳ ಗ್ರಹದ ಮೇಲಿನಿಂದ ಆರೂವರೆ ಎಡಿ ಎತ್ತರದಲ್ಲಿ ತೆಗೆದಿರುವ ಗ್ರಹದ ಮೇಲ್ಮೈ ಚಿತ್ರ, ನೌಕೆಯ ತಲೆಯ ಮೇಲಿರುವ ಸ್ಕೈ ಕ್ರೇನ್‌ಗೆ ಜೋಡಿಸಲಾದ ಕೇಬಲ್‌ಗಳಿಂದ ರೋವರ್ ಅನ್ನು ಕೆಳಕ್ಕೆ ಇಳಿಸುತ್ತಿರುವ ದೃಶ್ಯಗಳಿವೆ. ಕ್ಯಾಲಿಫೋರ್ನಿಯಾದ ಪಾಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೊಗಳ ಜತೆಗೆ, ಆಡಿಯೊ ರೆಕಾರ್ಡಿಂಗ್ ಸಹ ನೀಡಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು