ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಾಯನವಿಜ್ಞಾನ: ಮೂವರಿಗೆ ನೊಬೆಲ್‌ ಪುರಸ್ಕಾರ

Last Updated 5 ಅಕ್ಟೋಬರ್ 2022, 11:26 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್: ರಸಾಯನವಿಜ್ಞಾನದಲ್ಲಿ ಕೈಗೊಂಡ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳನ್ನು ಈ ವರ್ಷದ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್‌ ಸ್ವೀಡಿಷ್‌ ಅಕಾಡೆಮಿ ಬುಧವಾರ ಘೋಷಿಸಿದೆ.

ವಿಜ್ಞಾನಿಗಳಾದ ಕ್ಯಾರೊಲಿನ್ ಬರ್ಟೊಜಿ, ಮಾರ್ಟೆನ್ ಮೆಲ್ಡಲ್ ಹಾಗೂ ಕೆ.ಬ್ಯಾರಿ ಶಾರ್ಪ್‌ಲೆಸ್ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜರಾಗಿದ್ದಾರೆ ಎಂದು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್‌ ಎಲ್ಲೆಗ್ರೆನ್ ಹೇಳಿದ್ದಾರೆ.

‘ಪರಮಾಣುಗಳನ್ನು ಕ್ಷಿಪ್ರವಾಗಿ ಪ್ರತ್ಯೇಕಿಸುವ ಪ್ರಕ್ರಿಯೆ ಬಗ್ಗೆ ಈ ಮೂವರು ಗಮನಾರ್ಹ ಸಂಶೋಧನೆ ನಡೆಸಿದ್ದಾರೆ. ಈ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ತಂತ್ರವು ಕ್ಯಾನ್ಸರ್ ಔಷಧಿಗಳ ತಯಾರಿಕೆ ಹಾಗೂ ಡಿಎನ್‌ಎ ವಿಶ್ಲೇಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಬರ್ಟೊಜಿ ಅವರು ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ ವಿ.ವಿ., ಮೆಲ್ಡಲ್‌ ಅವರು ಡೆನ್ಮಾರ್ಕ್‌ನ ಕೋಪೆನ್‌ಹೆಗನ್‌ ವಿ.ವಿ ಹಾಗೂ ಶಾರ್ಪ್‌ಲೆಸ್‌ ಅವರು ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್‌ ರಿಸರ್ಚ್‌ ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಾರ್ಪ್‌ಲೆಸ್‌ ಅವರು 2001ರಲ್ಲಿಯೂ ನೊಬೆಲ್‌ ಪುರಸ್ಕಾರಕ್ಕೆ ಭಾಜನರಾಗಿದ್ದರು. ಎರಡನೇ ಬಾರಿಗೆ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಐದನೇ ವಿಜ್ಞಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT