ಶುಕ್ರವಾರ, ಡಿಸೆಂಬರ್ 9, 2022
21 °C

ಭೌತವಿಜ್ಞಾನ: ನೊಬೆಲ್‌ ಪುರಸ್ಕಾರ ಹಂಚಿಕೊಂಡ ಮೂವರು ವಿಜ್ಞಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಾಕ್‌ಹೋಮ್: ‘ಕ್ವಾಂಟಮ್‌ ಇನ್‌ಫಾರ್ಮೇಷನ್’ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳು ಈ ವರ್ಷದ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಫ್ರೆಂಚ್‌ ವಿಜ್ಞಾನಿ ಅಲೇನ್ ಆಸ್ಪೆಕ್ಟ್, ಅಮೆರಿಕದ ಜಾನ್‌ ಎಫ್‌.ಕ್ಲಾಸರ್ ಹಾಗೂ ಆಸ್ಟ್ರಿಯಾದ ವಿಜ್ಞಾನಿ ಆ್ಯಂಟನ್ ಜಿಲಿಂಗರ್ ಅವರು ನೊಬೆಲ್‌ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ರಾಯಲ್‌ ಸ್ವೀಡಿಷ್‌ ಅಕಾಡೆಮಿ ತಿಳಿಸಿದೆ.

‘ಅತ್ಯಂತ ಸೂಕ್ಷ್ಮಕಣಗಳಾದ ಫೋಟಾನ್‌ಗಳನ್ನು ಜೋಡಿಸುವ ವಿಧಾನವನ್ನು ಈ ವಿಜ್ಞಾನಿಗಳು ಸಂಶೋಧಿಸಿದ್ದು, ಭೌತವಿಜ್ಞಾನದ ಈ ಶಾಖೆಗೆ ಕ್ವಾಂಟಮ್ ಇನ್‌ಫಾರ್ಮೇಷನ್ ವಿಜ್ಞಾನ ಎನ್ನಲಾಗುತ್ತದೆ. ಮಾಹಿತಿಯನ್ನು ಅತ್ಯಂತ ಸುರಕ್ಷಿತವಾಗಿ ವರ್ಗಾವಣೆ ಮಾಡಲು, ಕ್ವಾಂಟಮ್‌ ಕಂಪ್ಯೂಟಿಂಗ್‌ ಹಾಗೂ ಸಂವೇದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ವಾಂಟಮ್‌ ಇನ್‌ಫಾರ್ಮೇಷನ್‌ಅನ್ನು ವ್ಯಾಪಕವಾಗಿ ಅನ್ವಯಿಸಲಾಗುತ್ತದೆ’ ಎಂದು ನೊಬೆಲ್‌ ಆಯ್ಕೆ ಸಮಿತಿ ಸದಸ್ಯೆ ಇವಾ ಒಲ್‌ಸನ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು