ನವದೆಹಲಿ: ‘ಭಾರತೀಯ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದ (ಐಐಎಸ್‌ಎಫ್) ಆರನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಲಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಮಂಗಳವಾರ ಸಂಜೆ 4.30ಕ್ಕೆ ಪ್ರಧಾನಿಯವರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಲಿದ್ದಾರೆ. ಕೊನೆಯ ದಿನ, ಡಿಸೆಂಬರ್ 25ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉತ್ಸವ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಶನಿ, ಗುರು ಗ್ರಹಗಳ ‘ಮಹಾ ಸಂಯೋಗ’: ಭಾರತದಲ್ಲಿ ಎಷ್ಟು ಗಂಟೆಗೆ ಕಾಣಿಸಲಿದೆ?

ಈ ವರ್ಷದ ಉತ್ಸವಕ್ಕೆ ‘ಸ್ವಾವಲಂಬಿ ಭಾರತ ಮತ್ತು ಜಾಗತಿಕ ಕಲ್ಯಾಣಕ್ಕಾಗಿ ವಿಜ್ಞಾನ’ ಎಂಬ ಧ್ಯೇಯ ಇರಿಸಿಕೊಳ್ಳಲಾಗಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್), ಆರ್‌ಎಸ್‌ಎಸ್ ಜತೆ ನಂಟು ಹೊಂದಿರುವ ವಿಜ್ಞಾನ ಸಂಘಟನೆ ‘ವಿಜ್ಞಾನ ಭಾರತಿ’ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ, ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ಸಚಿವಾಲಯದ ಸಹಭಾಗಿತ್ವದಲ್ಲಿ ವಿಜ್ಞಾನ ಉತ್ಸವ ಆಯೋಜಿಸಲಾಗಿದೆ.

ಈವರೆಗೆ ಉತ್ಸವದಲ್ಲಿ ಭಾಗವಹಿಸಲು ಒಂದು ಲಕ್ಷ ನೋಂದಣಿಯಾಗಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಈ ಬಾರಿ ವರ್ಚುವಲ್ ಉತ್ಸವ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.