ಮುಂಬೈ: ಅಂತರರಾಷ್ಟ್ರೀಯ ಸಹಯೋಗದ ಶಕ್ತಿಯಲ್ಲಿ ನಂಬಿಕೆ ಹೊಂದಿರುವ ಭಾರತವು ಸಂಶೋಧನಾ ಕ್ಷೇತ್ರದಲ್ಲಿ ಶತಕೋಟಿ ಡಾಲರ್ಗಳನ್ನು ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮುಂಬೈಯಲ್ಲಿ ನಡೆದ 18ನೇ ಅಂತರರಾಷ್ಟ್ರೀಯ ಖಗೋಳಶಾಸ್ತ್ರ ಹಾಗೂ ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ನಲ್ಲಿ ವರ್ಚ್ಯುವಲ್ ಆಗಿ ಮಾತನಾಡಿದ ಪ್ರಧಾನಿ, ಭಾರತದಲ್ಲಿ ಸಂಪ್ರದಾಯವು ನಾವೀನ್ಯತೆಯನ್ನು ಪೂರೈಸುತ್ತದೆ ಎಂದಿದ್ದಾರೆ.

ಇದೇ ವೇಳೆ ಚಂದ್ರನ ಮೇಲೆ ದಕ್ಷಿಣ ಧ್ರುವದ ಬಳಿ ಇಳಿದವರಲ್ಲಿ ನಾವೇ ಮೊದಲಿಗರು ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

'ಭಾರತವು ಲಡಾಖ್ನಲ್ಲಿ ಜಗತ್ತಿನ ಅತಿ ಎತ್ತರದ ಖಗೋಳ ವೀಕ್ಷಣಾಲಯಗಳಲ್ಲಿ ಒಂದನ್ನು ಹೊಂದಿದೆ. ಇದು ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿ ನಕ್ಷತ್ರಗಳೊಂದಿಗೆ ಕೈಕುಲುಕುವಷ್ಟು ಹತ್ತಿರದಲ್ಲಿದೆ' ಎಂದು ತಿಳಿಸಿದ್ದಾರೆ.

ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಅಂತರರಾಷ್ಟ್ರೀಯ ಒಲಿಂಪಿಯಾಡ್ (ಐಒಎಎ) ಪ್ರೌಢ ಶಾಲಾ ಮಕ್ಕಳಿಗೆ ನಡೆಸುವ ವಾರ್ಷಿಕ ಸ್ಪರ್ಧೆಯಾಗಿದೆ. ಈ ಸಲ ಆಗಸ್ಟ್ 11ರಿಂದ 21ರವರೆಗೆ ನಡೆಯುತ್ತಿದೆ.
.ಭಾರತದ ಬಾಹ್ಯಾಕಾಶ ಸಾಧನೆಗೆ ಜಾಗತಿಕ ಮಟ್ಟದಲ್ಲೂ ಮೆಚ್ಚುಗೆ: ಇಸ್ರೊ ಅಧ್ಯಕ್ಷ.NISAR | ಜುಲೈ 30ಕ್ಕೆ ಭೂಮಿ ಸಮೀಕ್ಷೆಯ 'ನಿಸಾರ್' ಉಪಗ್ರಹ ಉಡಾವಣೆ: ಇಸ್ರೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.