ಭಾನುವಾರ, ಸೆಪ್ಟೆಂಬರ್ 22, 2019
25 °C

ಇಸ್ರೊ ಕೇಂದ್ರದಲ್ಲಿ ಸಂತಸದ ವಾತಾವರಣ ಕ್ಷಣದಲ್ಲಿ ಮಾಯ

Published:
Updated:

ಬೆಂಗಳೂರು: ವಿಕ್ರಂ ಲ್ಯಾಂಡರ್ ಇನ್ನೇನು ಚಂದ್ರನ ನೆಲ ಸ್ಪರ್ಶಿಸಿತು ಎನ್ನುವಾಗಲೇ ಸಂಪರ್ಕ ಕಡಿದುಕೊಂಡ ಕಾರಣ ಪೀಣ್ಯದ ಇಸ್ರೊ ಕೇಂದ್ರದಲ್ಲಿ ನೆಲೆಸಿದ್ದ ಸಂಭ್ರಮದ ವಾತಾವರಣ ಕ್ಷಣದಲ್ಲೇ ಮಾಯವಾಯಿತು

ಪ್ರಧಾನಿ ನರೇಂದ್ರ ಮೋದಿ ಅವರು ಲ್ಯಾಂಡರ್ ಯೋಜನೆಯಂತೆಯೇ ಚಂದ್ರನತ್ತ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾಗ ಖುಷಿಯಿಂದ ಚಪ್ಪಾಳೆ ತಟ್ಟಿದ್ದರು. ಆದರೆ, ಕೊನೆಯ ಹಂತದಲ್ಲಿ ಅಂದರೆ 2.1 ಕಿಮೀ ದೂರದಲ್ಲಿ ಲ್ಯಾಂಡರ್ ಇದ್ದಾಗ ಅದರ ಸಂಪರ್ಕ ಕಡಿದುಕೊಂಡಿತು.

* ಇದನ್ನೂ ಓದಿ: ಚಂದ್ರನ ನೆಲ ಸ್ಪರ್ಶದ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್‌ ವಿಕ್ರಮ್

ಪ್ರಧಾನಿ ಬಳಿ ಬಂದ ಇಸ್ರೊ ಅದ್ಯಕ್ಷ ಕೆ.ಶಿವನ್ ಬೇಸರದಿಂದಲೇ ಕಿವಿಯಲ್ಲಿ ಏನೋ ಹೇಳಿದಾಗ ಏನೋ ಆಗಿದೆ ಎಂಬುದು ಎಲ್ಲರಿಗೂ ತಿಳಿಯಿತು. 15 ನಿಮಿಷದ ಬಳಿಕ ಅವರು ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಿಲ್ಲ, ಅದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದಾಗ ಎಲ್ಲರ ಮುಖದಲ್ಲೂ ನಿರಾಸೆ ಕವಿಯಿತು.

Post Comments (+)