ಟೆಕ್ಸಾಸ್ : ಎಲಾನ್ ಮಸ್ಕ್ ಒಡೆತನದ ‘ಸ್ಪೇಸ್ಎಕ್ಸ್’ ಗುರುವಾರ ಹಮ್ಮಿಕೊಂಡಿದ್ದ ಸ್ಟಾರ್ಶಿಪ್ ರಾಕೆಟ್ನ ಪ್ರಯೋಗಾರ್ಥ ಪರೀಕ್ಷೆ ವಿಫಲವಾಗಿದೆ. ನಭಕ್ಕೆ ಸಾಗುವ ದಾರಿಯಲ್ಲಿ ಬಾಹ್ಯಾಕಾಶ ನೌಕೆ ಇದ್ದ ರಾಕೆಟ್ನ ಮೇಲ್ಭಾಗ ಸ್ಫೋಟಗೊಂಡಿದೆ. ಆದರೆ, ರಾಕೆಟ್ನ ಬೂಸ್ಟರ್ (ಕೆಳಭಾಗ) ಭೂಮಿಗೆ ವಾಪಸ್ ಆಗಿದ್ದು, ಉಡಾವಣಾ ಕಟ್ಟೆಯ ಗೋಪುರದಲ್ಲಿನ ತಾಂತ್ರಿಕ ಬಾಹುಗಳು ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿವೆ.

ರಾಕೆಟ್ನ ಉಡಾವಣೆ ನಿಗದಿಯಂತೆ ನಡೆದಿತ್ತು. ಎಂಟೂವರೆ ನಿಮಿಷಗಳ ಬಳಿಕ ರಾಕೆಟ್ ‘ಯೋಜಿತವಲ್ಲದ ರೀತಿಯಲ್ಲಿ ಕ್ಷಿಪ್ರ ಬೇರ್ಪಡುವಿಕೆಗೆ’ ಒಳಗಾಯಿತು. ಆಗಸಕ್ಕೆ ಏರುತ್ತಿರುವ ಸಂದರ್ಭದಲ್ಲಿ ಭೂಮಿಯಿಂದ ಸಂಪರ್ಕ ಕಡಿದುಕೊಂಡ ಬಾಹ್ಯಾಕಾಶ ನೌಕೆಯ ಆರು ಎಂಜಿನ್ಗಳು ಒಂದರ ನಂತರ ಒಂದು ಕಾರ್ಯಾಚರಣೆ ಸ್ಥಗಿತಗೊಳಿಸಿದವು ಎಂದು ‘ಸ್ಪೇಸ್ಎಕ್ಸ್’ ಹೇಳಿದೆ.

ಹೊಸ ಮತ್ತು ಸುಧಾರಿತ ಮಾದರಿಯ ಬಾಹ್ಯಾಕಾಶ ನೌಕೆಯ ಮೊದಲ ಪರೀಕ್ಷೆ ಇದಾಗಿದ್ದು, ಟೆಕ್ಸಾಸ್ನಿಂದ ಉಡಾವಣೆ ಮಾಡಲಾಗಿತ್ತು. ಬಾಹ್ಯಾಕಾಶ ನೌಕೆಯು ಮೆಕ್ಸಿಕೊ ಕೊಲ್ಲಿ ಮೂಲಕ ಸಾಗಬೇಕಿತ್ತು. ಉಪಗ್ರಹಗಳನ್ನು ಬಾಹ್ಯಾಕಾಶ ನೌಕೆಯಿಂದ ಕಕ್ಷೆಗೆ ಬಿಡುವ ತಾಲೀಮು ನಡೆಸುವುದಕ್ಕಾಗಿ 10 ಉಪಗ್ರಹಗಳ ಪ್ರತಿಕೃತಿಗಳನ್ನು ರಾಕೆಟ್ನಲ್ಲಿ ಇರಿಸಲಾಗಿತ್ತು.

ರಾಕೆಟ್ ಭೂಮಿಯ ಸಂಪರ್ಕ ಕಡಿದುಕೊಳ್ಳುವುದಕ್ಕೂ ಮೊದಲು ಸ್ಪೇಸ್ಎಕ್ಸ್ ಕಂಪೆನಿಯು, ಭೂಮಿಗೆ ಬರಲಿರುವ ಬೂಸ್ಟರ್ ಅನ್ನು ಹಿಡಿಯುವುದಕ್ಕಾಗಿ ಉಡಾವಣಾ ಕಟ್ಟೆಯ ಗೋಪುರದಲ್ಲಿರುವ, ಚಾಪ್ಸ್ಟಿಕ್ಸ್ ಎಂದು ಕರೆಯಲಾಗಿರುವ ಬೃಹತ್ ತಾಂತ್ರಿಕ ಕೈಗಳನ್ನು ಸಕ್ರಿಯಗೊಳಿಸಿತ್ತು. ನಿಗದಿಯಂತೆ ಭೂಮಿಯತ್ತ ಮರಳಿದ ಬೂಸ್ಟರ್ ಗೋಪುರದ ಹತ್ತಿರ ಕೆಳಗಿಳಿಯುತ್ತಿರುವ ಸಂದರ್ಭದಲ್ಲಿ ಜೋಡಿ ಕೈಗಳು ಬೂಸ್ಟರ್ ಅನ್ನು ಯಶಸ್ವಿಯಾಗಿ ಹಿಡಿದಿಟ್ಟಿತು. ಇದಕ್ಕೂ ಮೊದಲು ಸ್ಪೇಸ್ಎಕ್ಸ್, ಈ ಪ್ರಯೋಗವನ್ನು ಒಂದು ಬಾರಿ ಮಾಡಿತ್ತು.

ಬಾಹ್ಯಾಕಾಶ ನೌಕೆಯ ಎಂಜಿನ್ ಫೈರ್ವಾಲ್ನಲ್ಲಿ ಇಂಧನ ಸೋರಿಕೆಯಾಗಿದ್ದು, ಅದು ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.