ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನಲ್ಲಿ ಮೊನಚು ಆಕೃತಿ ಪತ್ತೆ: ಚಿತ್ರ ಬಿಡುಗಡೆ ಮಾಡಿದ ನಾಸಾ

ಅಕ್ಷರ ಗಾತ್ರ

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ‘ಕ್ಯೂರಿಯಾಸಿಟಿ ರೋವರ್’ ಗುರುತಿಸಿರುವ ಮೊನಚು ಆಕೃತಿಯ ಚಿತ್ರಗಳನ್ನು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದೆ.

ನಾಸಾದ ‘ಸಿಇಟಿಐ ಇನ್ಸ್‌ಟಿಟ್ಯೂಟ್‌’ ಟ್ವಿಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದೆ. ‘ಮೊನಚು ಆಕೃತಿಗಳು ಬಂಡೆಗಲ್ಲುಗಳ ನಡುವಿನ ಟೊಳ್ಳಾದ ಭಾಗದಲ್ಲಿ ತುಂಬಿಕೊಂಡ ಸಿಮೆಂಟ್‌ನಂಥ ಪದರಗಳಾಗಿವೆ. ಮೃದುವಾದ ಬಂಡೆಗಳು ಸವೆದು ಹೋದ ಬಳಿಕವು ಸಿಮೆಂಟ್‌ನಂಥ ಈ ರಚನೆಗಳು ಹಾಗೆಯೇ ಉಳಿದುಕೊಂಡಿವೆ’ ಎಂದು ಅದು ತಿಳಿಸಿದೆ.

ಮಂಗಳನಲ್ಲಿನ ದೊಡ್ಡ ಕುಳಿ ‘ಗೇಲ್‌ ಕ್ರೇಟರ್‌’ನಲ್ಲಿ ಈ ಆಕೃತಿ ಪತ್ತೆಯಾಗಿದೆ ಎಂದು ‘ಸಿಇಟಿಐ ಇನ್ಸ್‌ಟಿಟ್ಯೂಟ್‌’ ಹೇಳಿದೆ.

ನಾಸಾ ಮಂಗಳನಲ್ಲಿಗೆ ಕಳುಹಿಸಿರುವ ‘ಕ್ಯೂರಿಯಾಸಿಟಿ ರೋವರ್’ ‘ಗೇಲ್ ಕ್ರೇಟರ್‌’ನ ಅನ್ವೇಷಣೆಯಲ್ಲಿ ತೊಡಗಿದೆ.

ಇನ್ನು ‘ಸಿಇಟಿಐ ಇನ್ಸ್‌ಟಿಟ್ಯೂಟ್‌’ ಎಂಬುದು ಅಂತರಿಕ್ಷದಲ್ಲಿ ಇರಬಹುದಾದ ಜೀವಿಗಳ ಅನ್ವೇಷಣೆಗೆಂದು ನಾಸಾ ಆರಂಭಿಸಿರುವ ಕಾರ್ಯ ಯೋಜನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT