ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಡ್ರೋನ್ ಸಮರಕ್ಕೆ ತಯಾರಿ

Last Updated 23 ಸೆಪ್ಟೆಂಬರ್ 2020, 7:13 IST
ಅಕ್ಷರ ಗಾತ್ರ

ತಂತ್ರಜ್ಞಾನ ಆಧರಿತ ಯುದ್ಧದ ತಯಾರಿಯಲ್ಲಿ ಅಮೆರಿಕ ತೊಡಗಿದೆ. ಈ ಬಾರಿ ಅದು ಹೂಡುತ್ತಿರುವ ಅಸ್ತ್ರ ಡ್ರೋನ್. ಡ್ರೋನ್‌ಗಳ ನಡುವಿನ ಯುದ್ಧ ಹೇಗಿರಬೇಕು, ಅದಕ್ಕೆಲ್ಲಾ ಏನೇನು ಪೂರ್ವ ತಯಾರಿ ಬೇಕು ಎಂದು ಯೋಜಿಸಿರುವ ಅಮೆರಿಕ 2021ರ ವೇಳೆಗೆ ಈ ವಿಚಾರದಲ್ಲಿ ಸರ್ವಸನ್ನದ್ಧತೆ ಸಾಧಿಸಲು ಸಜ್ಜಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಫೆಸಿಫಿಕ್ ಕಡಲಲ್ಲಿ ಪ್ರಾಯೋಗಿಕ ಡ್ರೋನ್ ಸಮರ ಏರ್ಪಡಿಸಲು ನಿರ್ಧರಿಸಿದೆ. ಇದು ಮಾನವರಹಿತ ವಿಮಾನಗಳ ಅತಿದೊಡ್ಡ ಸಮರಾಭ್ಯಾಸ ಎನಿಸಿದೆ.

ಡ್ರೋನ್‌ಗಳು ಯುದ್ಧದ ಸಮಯದಲ್ಲಿ ಹೇಗೆ ನೆರವಾಗುತ್ತವೆ ಎಂಬ ಕುರಿತು ತಿಳಿಯುವುದು ಹಾಗೂ ತಂತ್ರಜ್ಞಾನವನ್ನು ಪರೀಕ್ಷಿಸುವುದು ಈ ಸಮರಾಭ್ಯಾಸದ ಉದ್ದೇಶ ಎಂದು ರಿಯರ್ ಅಡ್ಮಿರಲ್ ರಾಬರ್ಟ್ ಗೌಚರ್ ತಿಳಿಸಿದ್ದಾರೆ.

ಭೂ ಮೇಲ್ಮೈ, ನೀರಿನ ಮೇಲೈ ಹಾಗೂ ನೀರನಾಳದಲ್ಲಿ ಡ್ರೋನ್‌ಗಳ ಸಾಮರ್ಥ್ಯ ಪರೀಕ್ಷಿಸಬೇಕಿದೆ.ಡ್ರೋನ್‌ಗಳ ಯುದ್ಧದ ಸಮಯದಲ್ಲಿ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ 2021ರ ಆರಂಭದಲ್ಲಿ ಯೋಜನೆಯೊಂದು ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ನೌಕಾಪಡೆಯು ನಿಯಮಿತವಾಗಿ ಯುದ್ಧವಿಮಾನಗಳ ತಾಲೀಮು ನಡೆಸುತ್ತದೆ. ಆದರೆ ಇದೇ ಮೊದಲ ಬಾರಿಗೆ ಮಾನವರಹಿತ ಸಮರನೌಕೆಯನ್ನು ಯುದ್ಧದ ತಾಲೀಮಿಗೆ ಒಳಪಡಿಸಲಿದೆ.

ಈ ಮಧ್ಯೆ ಅಮೆರಿಕ ಸರ್ಕಾರವು ಬೃಹತ್ ಗಾತ್ರದ ಮಾನವರಹಿತ ಹಡಗುಗಳನ್ನು ಅಭಿವೃದ್ಧಿಪಡಿಸಲು ಆರು ಕಂಪನಿಗಳಿಗೆ ಗುತ್ತಿಗೆ ನೀಡಿದೆ. 2022ರ ಮಧ್ಯಭಾಗದಲ್ಲಿ ಇವು ಸೇನೆಗೆ ಸೇರ್ಪಡೆಯಾಗಲಿವೆ.

ಭವಿಷ್ಯದ ಕಡಲ ಕಾರ್ಯಾಚರಣೆಯಲ್ಲಿ ಸ್ವಯಂಚಾಲಿತ ಮತ್ತು ಮಾನವರಹಿತ ವಾಹನಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಅಧಿಕಾರಿಗಳು ಮನಗಂಡಿದ್ದಾರೆ. ಅದರಲ್ಲೂ ಚೀನಾದಂತಹ ದೇಶದ ಜೊತೆಗಿನ ಬಿಕ್ಕಟ್ಟಿನ ಸಮಯದಲ್ಲಿ ಬಹುವಾಗಿ ನೆರವಿಗೆ ಬರಲಿವೆ ಎಂಬ ಲೆ‌ಕ್ಕಾಚಾರ ಅಮೆರಿಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT