ವಿಶ್ವದ ಅತ್ಯಂತ ಹಗುರ ಉಪಗ್ರಹ ವಿನ್ಯಾಸ: ನಾಸಾದಿಂದ ಉಡಾವಣೆ

ಚೆನ್ನೈ: ತಮಿಳುನಾಡಿನ ತಂಜಾವೂರಿನಲ್ಲಿರುವ ಶಾಸ್ತ್ರ ಡೀಮ್ಡ್ ಯೂನಿವರ್ಸಿಟಿಯ ವಿದ್ಯಾರ್ಥಿ ಎಸ್.ರಿಯಾಸ್ದೀನ್ ಅವರು ವಿಶ್ವದಲ್ಲಿಯೇ ಅತ್ಯಂತ ಹಗುರವಾದ ಉಪಗ್ರಹಗಳನ್ನು ವಿನ್ಯಾಸಗೊಳಿಸಿ ಗಮನ ಸೆಳೆದಿದ್ದಾರೆ.
ಶಾಸ್ತ್ರ ಡೀಮ್ಡ್ ಯೂನಿವರ್ಸಿಟಿಯಲ್ಲಿ ಮೆಕ್ಯಾಟ್ರಾನಿಕ್ಸ್ ಎಂಜಿನಿಯರಿಂಗ್ನ ಎರಡನೇ ವರ್ಷದ ವಿದ್ಯಾರ್ಥಿ ರಿಯಾಸ್ದೀನ್ ಅಭಿವೃದ್ಧಿಪಡಿಸಿರುವ ಈ ಉಪಗ್ರಹಗಳನ್ನು ‘ವಿಷನ್ ಸ್ಯಾಟ್ ವಿ1’ ಹಾಗೂ ‘ವಿಷನ್ ಸ್ಯಾಟ್ ವಿ2’ ಎಂದು ಹೆಸರಿಸಲಾಗಿದೆ. ಇವುಗಳ ತೂಕ ತಲಾ 33 ಗ್ರಾಂ ಇದ್ದರೆ, ಗಾತ್ರ 37 ಮಿ.ಮೀ!
ನಾಸಾ ಆಯೋಜಿಸಿದ್ದ ‘ಕ್ಯೂಬ್ಸ್ ಇನ್ ಸ್ಪೇಸ್’ ಎಂಬ ಜಾಗತಿಕ ಮಟ್ಟದ ಉಪಗ್ರಹ ವಿನ್ಯಾಸ ಸ್ಪರ್ಧೆಯ ಭಾಗವಾಗಿ ಈ ರಿಯಾಸ್ದೀನ್ ಈ ಉಪಗ್ರಹ ಅಭಿವೃದ್ಧಿಪಡಿಸಿ, ವಿಜೇತರಾಗಿ ಹೊರಹೊಮ್ಮಿದ್ದಾರೆ.
ವರ್ಜಿನಿಯಾದಲ್ಲಿರುವ ವ್ಯಾಲಪ್ಸ್ ಫ್ಲೈಟ್ ಫೆಸಿಲಿಟಿ ಕೇಂದ್ರದಿಂದ ಮುಂದಿನ ವರ್ಷ ಜೂನ್ನಲ್ಲಿ ‘ವಿಷನ್ ಸ್ಯಾಟ್ ವಿ1’ ಉಪಗ್ರಹವನ್ನು ನಾಸಾ ಉಡಾವಣೆ ಮಾಡಲಿದೆ. ‘ವಿಷನ್ ಸ್ಯಾಟ್ ವಿ2’ ಅನ್ನು ಆಗಸ್ಟ್ನಲ್ಲಿ ಉಡಾವಣೆ ಮಾಡಲಾಗುತ್ತದೆ.
ಈವರೆಗೆ, ಚೆನ್ನೈನ ಐಎನ್ಆರ್ಒ ಲ್ಯಾಬ್ಸ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ದಿಪಡಿಸಿದ್ದ ಉಪಗ್ರಹವೇ ವಿಶ್ವದ ಅತ್ಯಂತ ಹಗುರ ಎಂಬ ಹೆಗ್ಗಳಿಕೆ ಹೊಂದಿತ್ತು. ಅದರ ತೂಕ 64 ಗ್ರಾಂ ಇತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.