12 ಕೋಟಿ ಫೇಸ್‍ಬುಕ್ ಖಾತೆ ಹ್ಯಾಕ್! 

7

12 ಕೋಟಿ ಫೇಸ್‍ಬುಕ್ ಖಾತೆ ಹ್ಯಾಕ್! 

Published:
Updated:

ಲಂಡನ್: ಹ್ಯಾಕರ್‌ಗಳು ಸುಮಾರು 12 ಕೋಟಿ ಫೇಸ್‍ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ 81,000 ಖಾತೆಗಳ ಸಂದೇಶಗಳನ್ನು ಆನ್‍ಲೈನ್‍ನಲ್ಲಿ ಪ್ರಕಟಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಉಕ್ರೈನ್ , ರಷ್ಯಾ, ಬ್ರಿಟನ್, ಅಮೆರಿಕ, ಬ್ರೆಜಿಲ್ ಮೊದಲಾದ ರಾಷ್ಟ್ರಗಳ ಫೇಸ್‍ಬುಕ್ ಬಳಕೆದಾರರ ಮಾಹಿತಿಗಳಿಗೆ ಕನ್ನ ಹಾಕಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹ್ಯಾಕರ್‌ಗಳು ಒಂದು ಫೇಸ್‌‍ಬುಕ್ ಖಾತೆಯನ್ನು 10 ಸೆಂಟ್ಸ್ ಗೆ ಮಾರುವುದಾಗಿ ಬೇಡಿಕೆಯೊಡ್ಡಿ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಈ ಜಾಹೀರಾತುಗಳನ್ನು ಈಗ ತೆಗೆಯಲಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಫೇಸ್‍ಬುಕ್ ಖಾತೆಯಲ್ಲಿ ಸಂದೇಶ ಸೋರಿಕೆ ಆಗಿರುವುದು ಪತ್ತೆಯಾಗಿತ್ತು. ಆದರೆ ಹ್ಯಾಕಿಂಗ್ ಮೂಲಕ ಮಾಹಿತಿ ಸೋರಿಕೆ ಆಗಿಲ್ಲ ಎಂದು ಫೇಸ್‍ಬುಕ್ ಹೇಳಿತ್ತು.

ರಷ್ಯಾದಲ್ಲಿನ ಫೇಸ್‍ಬುಕ್ ಬಳಕೆದಾರರ ಖಾಸಗಿ ಸಂದೇಶಗಳು ಆನ್‍ಲೈನ್‍ನಲ್ಲಿ ಪ್ರಕಟವಾಗಿತ್ತು. ಇದರಲ್ಲಿ ಐವರು ಖಾತೆದಾರರನ್ನು ಬಿಬಿಸಿ ರಷ್ಯನ್ ಸರ್ವಿಸ್ ಸಮೀಪಿಸಿದ್ದು, ಮಾಹಿತಿ ಸೋರಿಕೆಯಾಗಿದ್ದು ನಿಜ ಎಂದು ದೃಢೀಕರಿಸಿದೆ.

ರಜಾಕಾಲದ ಫೋಟೊ, ಬ್ರಿಟಿಷ್ ರಾಕ್ ಬ್ಯಾಂಡ್ ಡೆಪೇಚ್ ಮೋಡ್ ಬಗ್ಗೆ ಮಾಡಿದ ಚಾಟ್, ಅಳಿಯನ ಬಗ್ಗೆ ಮಾಡಿದ ದೂರು ಹೀಗೆ ಫೇಸ್‍ಬುಕ್ ಬಳಕೆದಾರರ ಖಾಸಗಿ ಚಾಟ್ ಸೋರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಬ್ರೌಸರ್ ಎಕ್ಸ್ಟೆನ್ಶನ್ ನಿಂದಾಗಿ ಹ್ಯಾಕ್ ಆಗಿದೆ. ಬೌಸರ್ ಎಕ್ಸ್ಟೆನ್ಶನ್  ಬಳಸುವಾಗ ಅದರ ಮೂಲ ಯಾವುದು ಎಂದು ಪರಿಶೀಲಿಸುವುದು ಅಗತ್ಯ ಎಂದು ಡಿಜಿಟಲ್ ಟ್ರೆಂಡ್ಸ್ ಸಲಹೆ ನೀಡಿದೆ.
 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !