ಶನಿವಾರ, ಅಕ್ಟೋಬರ್ 16, 2021
22 °C

Twitter Down | ದೇಶದ ಹಲವು ಬಳಕೆದಾರರಿಗೆ ಟ್ವಿಟರ್‌ ಸೇವೆಯಲ್ಲಿ ವ್ಯತ್ಯಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಕೆಲವಡೆ ಬುಧವಾರ ಬೆಳಿಗ್ಗೆ ಟ್ವಿಟರ್‌ ಸರ್ವರ್ ಡೌನ್ ಆಗಿ ಕೆಲವು ಬಳಕೆದಾರರು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

ಬೆಳಿಗ್ಗೆ 8ರ ಸುಮಾರಿಗೆ ಅನೇಕ ಬಳಕೆದಾರರಿಗೆ ಟ್ವಿಟರ್‌ ಬಳಕೆಗೆ ಅಡಚಣೆಯಾಗಿದೆ ಎಂಬುದು ಬಳಕೆದಾರರ ವರದಿ ಆಧಾರಿತ ವೆಬ್‌ ಮಾನಿಟರಿಂಗ್ ಗ್ರೂಪ್‌ ‘ಡೌನ್‌ಡಿಟೆಕ್ಟರ್’ನಿಂದ ತಿಳಿದುಬಂದಿದೆ.

ಓದಿ: 

ಗೂಗಲ್‌ನ ಉಚಿತ ಇ–ಮೇಲ್ ಸೇವೆ ಜಿ–ಮೇಲ್ ಮಂಗಳವಾರ ಮಧ್ಯಾಹ್ನ ದೇಶದ ಹಲವೆಡೆ ಕೆಲ ಕಾಲ ಸ್ಥಗಿತಗೊಂಡಿತ್ತು. ಮೇಲ್ ಕಳುಹಿಸಲು ಹಾಗೂ ಸ್ವೀಕರಿಸಲು ಬಳಕೆದಾರರಿಗೆ ಸಾಧ್ಯವಾಗಿರಲಿಲ್ಲ.

ಕೆಲವು ದಿನಗಳ ಹಿಂದಷ್ಟೇ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಮೆಸೆಂಜರ್, ವಾಟ್ಸ್‌ಆ್ಯಪ್ ಸೇವೆಗಳು ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು