ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಟಿಕ್‌ಟಾಕ್ ವಿರುದ್ಧ ನೆಟ್ಟಿಗರ ಆಕ್ರೋಶ

Last Updated 19 ಮೇ 2020, 10:22 IST
ಅಕ್ಷರ ಗಾತ್ರ

ಚೀನಾ ಮೂಲದ ‘ಟಿಕ್‌ಟಾಕ್’ ವಿಡಿಯೊ ಸಾಮಾಜಿಕ ಜಾಲತಾಣದ ಮೇಲೆ ಭಾರತೀಯರ ಕೆಂಗಣ್ಣು ಬಿದ್ದಿದೆ. ಅದರ ವಿರುದ್ಧ ನೆಟ್ಟಿಗರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಟಿಕ್‌ಟಾಕ್ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ಈ ಆ್ಯಪ್‌ನಲ್ಲಿ ಮಹಿಳೆಯರು, ಮಕ್ಕಳು, ಪ್ರಾಣಿಗಳ ಮೇಲಿನ ದೌರ್ಜನ್ಯ ಕುರಿತಾದ ಸಾಕಷ್ಟು ವಿಡಿಯೊಗಳು ಹರಿದಾಡುತ್ತಿವೆ. ಇದೀಗ ಮಹಿಳಾ ದೌರ್ಜನ್ಯದ ವಿಡಿಯೊವೊಂದನ್ನು ತೆಗೆದುಹಾಕುವಂತೆ ಭಾರತದ ಮಹಿಳಾ ಆಯೋಗವು ಟಿಕ್‌ಟಾಕ್‌ಗೆ ಸೂಚಿಸಿದೆ. ಅಲ್ಲದೆ ಈ ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳುವಂತೆ ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದೆ.

ಟಿಕ್‌ ಟಾಕ್ ವಿಡಿಯೊ ಮಾಡಿ ಟ್ವಿಟರ್‌ನಲ್ಲಿ ಶೇರ್ ಆಗಿರುವ ವಿಡಿಯೊದಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿಯನ್ನು ವೈಭವೀಕರಿಸಿದ ದೃಶ್ಯಗಳಿದ್ದವು. ಇದು ಹಿಂಸಾಚಾರವನ್ನಷ್ಟೇ ಅಲ್ಲದೆ, ಪುರುಷ ಪ್ರಧಾನ ಮನಸ್ಥಿತಿಯನ್ನೂ ಬಿಂಬಿಸುತ್ತದೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದು, ವಿಡಿಯೊ ತಯಾರಿಸಿರುವ ಫೈಜಲ್ ಸಿದ್ದಿಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗ ಒತ್ತಾಯಿಸಿದೆ.

ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ನೆಟ್ಟಿಗರು #BanTikToklnlndia ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೀಗ ಟ್ರೆಂಡ್ ಆಗುತ್ತಿದೆ.

ಇದೀಗ ಟಿಕ್‌ಟಾಕ್ ಆ ವಿಡಿಯೊವನ್ನು ತೆಗೆದಿದ್ದು, ಫೈಜಲ್ ಖಾತೆಗೆ ನಿರ್ಬಂಧ ಹೇರಿದೆ. ಟಿಕ್‌ಟಾಕ್‌ನಲ್ಲಿ ಹಿಂಸಾಚಾರ, ತಾರತಮ್ಯ ನೀತಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೊಗಳನ್ನು ಬಳಕೆದಾರರು ನಿರ್ಮಿಸುತ್ತಿದ್ದಾರೆ. ಅಲ್ಲದೆ, ಪ್ರಾಣಿಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊಗಳೂ ಸಾಕಷ್ಟಿವೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂಬುದು ನೆಟ್ಟಿಗರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT