ಬುಧವಾರ, ಅಕ್ಟೋಬರ್ 5, 2022
26 °C

ಟ್ರಾಫಿಕ್‌ನಲ್ಲೇ ಲವ್‌, ಮದುವೆ: ಇನ್ನೂ ಮುಗಿದಿಲ್ಲ ‘ಈಜಿಪುರ ಮೇಲ್ಸೇತುವೆ‘!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟ್ರಾಫಿಕ್‌ ಜಾಮ್‌ನಲ್ಲೇ ಪ್ರೀತಿ ಮಾಡಿದೆ, ಮುಂದೆ ಮದುವೆಯಾದೆ! ಆದರೆ ‘ಈಜಿಪುರ ಮೇಲ್ಸೇತುವೆ‘ ಕಾಮಗಾರಿ ಮಾತ್ರ ಇನ್ನೂ ನಡೆಯುತ್ತಲೇ ಇದೆ...?

ರೆಡ್ಡಿಟ್‌ ಟ್ವಿಟರ್‌ ಬಳಕೆದಾರರೊಬ್ಬರು 5 ವರ್ಷಗಳು ಕಳೆದರೂ ‘ಈಜಿಪುರ ಮೇಲ್ಸೇತುವೆ‘ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಈ ವರ್ಷಗಳಲ್ಲಿ ನನ್ನ ಪ್ರೀತಿ ಅರಳಿ, ಮದುವೆಯಾದರೂ ಕಾಮಗಾರಿ ಮಾತ್ರ ಕುಂಟುತ್ತ ಸಾಗಿದೆ ಎಂದು ವ್ಯಂಗ್ಯವಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಓದಿ: ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

ಈ ಪೋಸ್ಟ್‌ ಅನ್ನು ನೆಟ್ಟಿಗರು ಹಂಚಿಕೊಂಡಿದ್ದು ಅಧಿಕಾರಿಗಳ ಕೆಲಸ ಬಗ್ಗೆ ಕಿಡಿಕಾರಿದ್ದಾರೆ. ಟ್ರಾಫಿಕ್‌ ಸುಧಾರಣೆ ಬಗ್ಗೆ ಆಸಕ್ತಿ ತೋರದ ಅಧಿಕಾರಿಗಳ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

5 ವರ್ಷಗಳ ಹಿಂದೆ...

‘ಈಜಿಪುರ ಮೇಲ್ಸೇತುವೆ‘ ಕಾಮಗಾರಿ ನಡೆಯುತ್ತಿರುವ ‘ಸೋನಿ ವರ್ಲ್ಡ್‌‘ ಸಮೀಪ ಟ್ರಾಫಿಕ್‌ ಜಾಮ್‌ನಲ್ಲಿ ಅವಳನ್ನು ನೋಡಿದೆ. ಈ ಸಂಚಾರದ ಕಿರಿ ಕಿರಿಯಲ್ಲಿ ಪರಿಚಿತರಾಗಿ ಆಪ್ತರಾದೆವು. ನಂತರದ ದಿನಗಳಲ್ಲಿ ಅವಳನ್ನು ಮನೆಗೆ ಡ್ರಾಪ್‌ ಮಾಡುತ್ತಿದೆ. ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸುಸ್ತಾಗಿ, ಹೊಟ್ಟೆ ಹಸಿವಿನಿಂದ ಸಮೀಪದಲ್ಲಿರುವ ಹೋಟೆಲ್‌ಗಳಿಗೆ ಹೋಗುತ್ತಿದ್ದೆವು. ಹೀಗೆ ನಮ್ಮ ಬಾಂಧವ್ಯ ಮುಂದುವರೆಯಿತು. ಮೂರು ವರ್ಷಗಳು ನಾವು ಡೇಟಿಂಗ್‌ ಮಾಡಿದೆವು.

ಓದಿ: ‘ಸೈಮಾ‘ ತಡ ರಾತ್ರಿ ಪಾರ್ಟಿ: ನಟ ಯಶ್‌, ಅಭಿಷೇಕ್‌ ಅಂಬರೀಷ್‌ ಭಾಗಿ; ದೂರು ದಾಖಲು

2 ವರ್ಷಗಳ ಹಿಂದೆ ಅವಳನ್ನು ಮದುವೆಯಾದೆ. ಸದ್ಯ ಅದೇ ಕಾಮಗಾರಿ ರಸ್ತೆಯಲ್ಲಿ ಮನೆಯಿಂದ ಕಚೇರಿಗೆ ಓಡಾಡುತ್ತಿದ್ದು, ನಿತ್ಯವೂ ಟ್ರಾಫಿಕ್‌ನಲ್ಲಿ ‘ಜಾಮ್‌‘ ಆಗುತ್ತಿದ್ದೇನೆ. 5 ವರ್ಷ ಕಳೆದರೂ 2.5 ಕೀ.ಮೀಟರ್‌ ಉದ್ದದ ಈ ಮೇಲ್ಸೇತುವೆ ಕಾಮಗಾರಿ ಮಾತ್ರ ಇನ್ನೂ ನಡೆಯುತ್ತಲೇ ಇದೆ ಎಂದು ನಿರ್ಮಾಣ ಕಾರ್ಯದ ಆಮೆ ನಡಿಗೆ ಕುರಿತು ಗಮನ ಸೆಳೆದಿದ್ದಾರೆ.

ಇಲ್ಲಿ ನಾನು ಎಲ್ಲಾ ಕಥೆಯನ್ನು ಬರೆಯುತ್ತಿಲ್ಲ ಎಂದು ಹೇಳುವ ಮೂಲಕ ಅವರು ಬರಹವನ್ನು ಪೋಸ್ಟ್‌ ಮಾಡಿದ್ದಾರೆ.

ಈ ಬರಹಕ್ಕೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು