ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯ್ಸ್ ಲಾಕರ್ ರೂಂ ಪ್ರಕರಣ: ಅಪ್ರಾಪ್ತ ವಿದ್ಯಾರ್ಥಿ ಬಂಧನ, ಹಲವರ ಗುರುತು ಪತ್ತೆ

ಅಕ್ಷರ ಗಾತ್ರ

ನವದೆಹಲಿ: ‘ಬಾಯ್ಸ್‌ ಲಾಕರ್‌ ರೂಂ’ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಅಪ್ರಾಪ್ತ ವಿದ್ಯಾರ್ಥಿಯೊಬ್ಬನನ್ನುಬಂಧಿಸಿದ್ದು, 20 ವಿದ್ಯಾರ್ಥಿಗಳ ಗುರುತನ್ನುಪತ್ತೆಹಚ್ಚಿದ್ದಾರೆ.

ಹುಡುಗರ ಗುಂಪೊಂದುಇನ್‌ಸ್ಟಾಗ್ರಾಂನಲ್ಲಿ ಗ್ರೂಪ್ ಆರಂಭಿಸಿದ್ದು ಆ ಗ್ರೂಪ್‌ನ ಹೆಸರೇ Bois Locker Room. ಇದರಲ್ಲಿ ಸರಿ ಸುಮಾರು 100 ಸದಸ್ಯರಿದ್ದಾರೆ.ಇಲ್ಲಿರುವ ಹುಡುಗರು ಅಪ್ರಾಪ್ತರಾಗಿದ್ದು, ದಕ್ಷಿಣ ದೆಹಲಿಯವರಾಗಿದ್ದಾರೆ.

ಚಾಟ್ ಗ್ರೂಪ್‌ನಲ್ಲಿ ಬಾಲಕಿಯರ ಆಕ್ಷೇಪಾರ್ಹ ಫೋಟೊಗಳನ್ನು ಶೇರ್ ಮಾಡಿ, ಅತ್ಯಾಚಾರ ಸೇರಿದಂತೆ ಅಕ್ರಮ ಕೃತ್ಯಗಳ ಬಗ್ಗೆ ಚರ್ಚೆಯಾಗಿದೆ.

ಈ ವಿಷಯ ತಿಳಿದದೆಹಲಿ ಮಹಿಳಾ ಆಯೋಗಇನ್‌ಸ್ಟಾಗ್ರಾಂ ಗ್ರೂಪ್‌ನಲ್ಲಿರುವ ಸದಸ್ಯರ ವಿವರಗಳನ್ನು ನೀಡುವಂತೆ ಇನ್‌ಸ್ಟಾಗ್ರಾಂಗೆ ನೋಟಿಸ್‌ ನೀಡಿದೆ.

‘ಅಪ್ರಾಪ್ತ ಬಾಲಕಿಯರ ಮತ್ತು ಯುವತಿಯರ ಆಕ್ಷೇಪಾರ್ಹ ಚಿತ್ರಗಳನ್ನು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಹಂಚಿಕೊಳ್ಳಲು ಈ ಗ್ರೂಪ್‌ ಅನ್ನು ಬಳಸಲಾಗಿದೆ. ಗ್ರೂಪ್‌ನ ಸದಸ್ಯರು ಮಹಿಳೆಯರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರದ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ’ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಚಾಟ್‌ ಗ್ರೂಪ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್‌ ಆಗಿರುವ ಬಗ್ಗೆ ದೆಹಲಿ ಸೈಬರ್‌ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಿದ್ದಾರೆ.

ಚಾಟ್‌ ರೂಂನಲ್ಲಿ ಹಂಚಿಕೊಂಡ ತನ್ನ ಚಿತ್ರಗಳನ್ನು ಪತ್ತೆ ಮಾಡಿದ ನಂತರ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ದೆಹಲಿ ಪೊಲೀಸರಿಗೆ ದೂರು ನೀಡಿದ್ದಳು.

ಪ್ರಕರಣ ಸಂಬಂಧ 15 ವರ್ಷದ ಬಾಲಕನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಬಾಲಕ ಚಾಟ್‌ ಗ್ರೂಪ್‌ನ 20 ಸದಸ್ಯರನ್ನು ಗುರುತಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಪಿನ ಸದಸ್ಯರು ರಾಷ್ಟ್ರ ರಾಜಧಾನಿಯ ಪ್ರಮುಖ ಶಾಲೆಗಳ ವಿಧ್ಯಾರ್ಥಿಗಳಾಗಿದ್ದರು. ಈ ಗ್ರೂಪ್‌ನಲ್ಲಿ ಕೇವಲ ಕಾಲೇಜು ವಿದ್ಯಾರ್ಥಿಗಳು ಸದಸ್ಯರಾಗಿದ್ದು,ಸ್ಕ್ರೀನ್‌ಶಾಟ್‌ಗಳು ವೈರಲ್‌ ಆದ ಬಳಿಕ ಗ್ರೂಪನ್ನು ಡಿಲೀಟ್‌ ಮಾಡಲಾಗಿದೆ. ನಂತರ ‘ಲಾಕರ್‌ ರೂಮ್‌ 2.0’ ಎಂಬ ಹೆಸರಿನಲ್ಲಿ ಮತ್ತೊಂದು ಗ್ರೂಪನ್ನು ರಚಿಸಿಲಾಗಿದ್ದು, ಇದರಲ್ಲಿ ಹುಡುಗಿಯರನ್ನು ಸಹ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಲೈಂಗಿಕ ದೌರ್ಜನ್ಯವನ್ನುಉತ್ತೇಜಿಸುವ, ಮಹಿಳೆಯರು ಮತ್ತು ಯುವಜನರನ್ನು ಶೋಷಿಸುವ ನಡವಳಿಕೆಗೆ ನಾವು ಅನುಮತಿ ನೀಡುವುದಿಲ್ಲ. ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಇನ್‌ಸ್ಟಾಗ್ರಾಂ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT