ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಯೆಜ್‌ ಕಾಲುವೆಯಲ್ಲಿ ಅಡ್ಡ ನಿಂತ ಹಡಗು: ಸಾಮಾಜಿಕ ತಾಣಗಳಲ್ಲಿ ಮೀಮ್‌ಗಳ ಹರಿದಾಟ

Last Updated 26 ಮಾರ್ಚ್ 2021, 9:06 IST
ಅಕ್ಷರ ಗಾತ್ರ

ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ‘ಎಂ.ವಿ. ಎವರ್‌ಗ್ರೀನ್’ ಎಂಬ ದೈತ್ಯ ಕಂಟೇನರ್ ಹಡಗು ಸಿಲುಕಿಕೊಂಡಿರುವ ಪರಿಣಾಮ ಸಂಚಾರ ಬಿಕ್ಕಟ್ಟು ಎದುರಾಗಿರುವುದು ದೊಡ್ಡ ಸುದ್ದಿಯಾಗಿದೆ.

ಈ ಬೃಹತ್‌ ಗಾತ್ರದ ಹಡಗನ್ನು ತೆರವುಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದರ ಕಾರ್ಯಾಚರಣೆಗೆ ಚಿಕ್ಕ ಬುಲ್ಡೋಜರ್‌ವೊಂದು ದೈತ್ಯ ಹಡಗಿನ ಮುಂದೆ ಬಂದು ನಿಂತಿರುವ ಚಿತ್ರ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಚಿತ್ರವು ಮೀಮ್‌ಗಳ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಕೆಲವರು ಬುಲ್ಡೋಜರ್‌ ಅನ್ನು ತಮ್ಮೊಂದಿಗೆ ಮತ್ತು ಹಡಗನ್ನು ಜೀವನದ ಸಮಸ್ಯೆಗಳೊಂದಿಗೆ ಹೋಲಿಸಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮದೇ ರೇಖಾಚಿತ್ರಗಳ ಮೂಲಕ ಹಾಸ್ಯಪ್ರಜ್ಞೆ ಮೆರೆದಿದ್ದಾರೆ.

ಟ್ವೀಟಿಗರೊಬ್ಬರು ಹಡಗನ್ನು ತಮ್ಮ ಸಂಬಂಧಿಕರಿಗೆ, ಕಾಲುವೆಯನ್ನು ತಮ್ಮ ಮನೆಗೆ ಮತ್ತು ಬುಲ್ಡೋಜರ್‌ ಅನ್ನು ತಮಗೆ ಹೋಲಿಸಿಕೊಂಡು ಟ್ವೀಟ್‌ ಮಾಡಿದ್ದಾರೆ.

ನಿಮ್ಮನ್ನು ನಗೆಗಡಲಲ್ಲಿ ತೇಲಿಸುವ ಮೀಮ್‌ಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT