ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ: ಎಲೊನ್ ಮಸ್ಕ್

Last Updated 19 ಆಗಸ್ಟ್ 2022, 9:52 IST
ಅಕ್ಷರ ಗಾತ್ರ

ನವದೆಹಲಿ: ಪರಾಗ್ ಅಗರ್‌ವಾಲ್ ನೇತೃತ್ವದ ಟ್ವಿಟರ್, ನಕಲಿ ಮತ್ತು ಬಾಟ್ ಖಾತೆಗಳ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದು ಎಲೊನ್ ಮಸ್ಕ್ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಮೂಲಕ ಜನಾಭಿಪ್ರಾಯ ರೂಪಿಸಲಾಗುತ್ತದೆ ಮತ್ತು ಸ್ಪಾಮ್ ಖಾತೆಗಳು ಜನರನ್ನು ವಂಚಿಸುತ್ತಿವೆ ಎಂದು ಎಲೊನ್ ಮಸ್ಕ್ ಆರೋಪಿಸಿದ್ದರು.

ಅಲ್ಲದೆ, ಟ್ವಿಟರ್ ಖರೀದಿ ಪ್ರಸ್ತಾವಕ್ಕೂ ಮೊದಲು, ಅದರಲ್ಲಿರುವ ನಕಲಿ ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಎಲ್ಲ ಸ್ಪಾಮ್ ಖಾತೆಗಳನ್ನು ನಿರ್ಬಂಧಿಸಬೇಕು ಎಂದು ಎಲೊನ್ ಮಸ್ಕ್ ಒತ್ತಾಯಿಸಿದ್ದರು.

ನಕಲಿ ಖಾತೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ವಿಟರ್ ಹೇಳಿತ್ತಾದರೂ, ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಕಂಪನಿ ವಿಫಲವಾಗಿತ್ತು. ಹೀಗಾಗಿ ಎಲೊನ್ ಮಸ್ಕ್, ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT