ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Twitter New Logo: ಟ್ವಿಟರ್‌​​ಗೆ ‘X’ ಹೊಸ ಲೋಗೊ- ಎಲಾನ್ ಮಸ್ಕ್ ಘೋಷಣೆ

Published 24 ಜುಲೈ 2023, 10:07 IST
Last Updated 24 ಜುಲೈ 2023, 10:07 IST
ಅಕ್ಷರ ಗಾತ್ರ

ಬೆಂಗಳೂರು: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್‌ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಪ್ರಸಿದ್ಧ ಮೈಕ್ರೋಬ್ಲಾಗಿಂಗ್‌ ಪ್ಲಾಟ್‌ಫಾರ್ಮ್​ನಲ್ಲಿ ಹಲವು ಬದಲಾವಣೆ ಮಾಡುತ್ತಲೇ ಇದ್ದಾರೆ. ಇದೀಗ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ಹೊಸ ಲೋಗೊವನ್ನು ಘೋಷಣೆ ಮಾಡಿದ್ದಾರೆ.

ಮಿನುಗುತ್ತಿರುವ ‘X’ ಚಿತ್ರವನ್ನು ಮಸ್ಕ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಶೀಘ್ರದಲ್ಲೇ ನಾವು ಟ್ವಿಟರ್‌ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ’ ಎಂದು ಎಲಾನ್‌ ಮಸ್ಕ್‌ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಎಲಾನ್‌ ಮಸ್ಕ್ ಈ ರೀತಿ ಟ್ವೀಟ್ ಮಾಡಿದ ಬೆನ್ನಲ್ಲೇ ಈ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಅನೇಕರು ಟ್ವಿಟರ್ ಲೋಗೊವನ್ನು ಬದಲಾಯಿಸಬೇಡಿ ಎಂದು ಹೇಳಿದ್ದರು.

ಇದರ ಜೊತೆಗೆ ಟ್ವಿಟರ್‌ ಅನ್ನು ‘ಎಕ್ಸ್’ ಆ್ಯಪ್ ಎಂದು ರೀಬ್ರ್ಯಾಂಡ್ ಮಾಡಿರುವ ಬಗ್ಗೆಯೂ ಟ್ವೀಟ್ ಮಾಡಿರುವ ಮಸ್ಕ್, ಈ ಆ್ಯಪ್ ಜಗತ್ತಿನಾದ್ಯಂತ ಲೈವ್ ಆಗಲಿದೆ ಎಂದು ಘೋಷಿಸಿದ್ದಾರೆ. ಈ ಆ್ಯಪ್ ಸಾಕಷ್ಟು ವಿಶೇಷವಾಗಿದ್ದು, ಜನರು ತಮ್ಮ ಅನಿಸಿಕೆಗಳನ್ನು ವಿಶ್ವದ ಮುಂದೆ ಹಂಚಿಕೊಳ್ಳುವ ಇರುವ ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.

ಹೊಸ ಆ್ಯಪ್‌ನಲ್ಲಿ ಆಡಿಯೊ, ವಿಡಿಯೊ, ಸಂದೇಶ ಕಳುಹಿಸಬಹುದು, ಬ್ಯಾಂಕಿಂಗ್ ಪಾವತಿ ಆಯ್ಕೆಯೂ ಇದೆ ಎಂದು ವಿವರಿಸಿದ್ದಾರೆ.

ಓದಿ... ಟ್ವಿಟರ್‌ ಖಾತೆಗಳಿಗೆ ಬ್ಲ್ಯೂ ಟಿಕ್‌ ಪಡೆದು, ಆದಾಯ ಗಳಿಸಿ– ಎಲಾನ್‌ ಮಸ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT