ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟೂರಲ್ಲೇ ಫೇಸ್‌ಬುಕ್‌ಗೆ ತಾತ್ಸಾರ! TikTok, BeReal ಆ್ಯಪ್‌ಗಳಿಂದ ಹಿಂದಕ್ಕೆ

Last Updated 21 ಆಗಸ್ಟ್ 2022, 14:48 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಮೆಟಾ ಕಂಪನಿ ಒಡೆತನದ ಫೇಸ್‌ಬುಕ್‌ ಬಗ್ಗೆ ಅಮೆರಿಕದಲ್ಲಿ ತಾತ್ಸಾರ ಉಂಟಾಯಿತೇ?

ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್‌ಗೆ ಹುಟ್ಟೂರಲ್ಲೇ ದೊಡ್ಡ ಹಿನ್ನಡೆಯುಂಟಾಗುತ್ತಿದೆ ಎಂಬಇಂತಹದೊಂದು ಸಂಗತಿ ಬಯಲಿಗೆ ಬಂದಿದೆ.

ಇದಕ್ಕೆ ಕಾರಣ ಚೀನಾ ಮೂಲದ ಟಿಕ್‌ ಟಾಕ್‌ ಹಾಗೂ ಅಮೆರಿಕದ ಬಿ–ರಿಯಲ್ (BeReal) ಎಂಬ ಹೊಸ ಆ್ಯಪ್‌ಗಳು ಕಾರಣ ಎನ್ನಲಾಗುತ್ತಿದೆ.

ಐಫೋನ್ ಆ್ಯಪ್ ಸ್ಟೋರ್‌ನ ಇತ್ತೀಚಿನ ಡಾಟಾಗಳ ಪ್ರಕಾರ ಅಮೆರಿಕದ ಟಾಪ್ 10 ಜನಪ್ರಿಯ ಆ್ಯಪ್‌ಗಳಲ್ಲಿ ಫೇಸ್‌ಬುಕ್ ಹಿಂದಕ್ಕೆ ಸರಿದಿದೆ ಎಂದು ತಂತ್ರಜ್ಞಾನ ಸುದ್ದಿ ಪ್ರಕಟಿಸುವ ವೆಬ್‌ಸೈಟ್ ಟೆಕ್‌ಕ್ರಂಚ್ ವರದಿ ಮಾಡಿದೆ. ಬಳಕೆದಾರರು ಹೊಸ ಸೊಶಿಯಲ್ ನೆಟ್‌ವರ್ಕಿಂಗ್ ಅನುಭವ ಪಡೆಯಲು ಹಾಗೂ ಟಿಕ್‌ ಟಾಕ್‌ನಂತಹ ಜನಪ್ರಿಯ ಆ್ಯಪ್‌ನ ಪ್ರಭಾವ ಸಾಕಷ್ಟು ಕಾರಣವಾಗಿದೆ ಎಂದು ಹೇಳಿದೆ.

ಕಳೆದ ವರ್ಷ ಐಫೋನ್ ಆ್ಯಪ್ ಸ್ಟೋರ್‌ನಲ್ಲಿ ಫೇಸ್‌ಬುಕ್ ಕೇವಲ 7 ಬಾರಿ ಟಾಪ್ 10 ಪಟ್ಟಿಯಿಂದ ಹಿಂದೆ ಸರಿದಿತ್ತು. ಈ ವರ್ಷ 97 ಬಾರಿ ಹಿಂದೆ ಸರಿದಿದೆ ಎಂದು ವರದಿ ಹೇಳಿದೆ.

ಆ್ಯಪಲ್ ಆ್ಯಪ್‌ಸ್ಟೋರ್ ಹೊರತುಪಡಿಸಿ ಫೇಸ್‌ಬುಕ್ ಕಳೆದ ವರ್ಷ 7 ಸಾರಿ ಟಾಪ್ ಟೆನ್ ಪಟ್ಟಿಯಿಂದ ಹಿಂದೆ ಬಿದ್ದಿದ್ದರೆ, 2022 ರಲ್ಲಿ 59 ಸಾರಿ ಹಿಂದೆ ಬಿದ್ದಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಈ ವರ್ಷ ಫೇಸ್‌ಬುಕ್ ಆ್ಯಪಲ್ ಸ್ಟೋರ್‌ನಲ್ಲಿ ಸತತ 37 ದಿನ ಟಾಪ್ ಟೆನ್ ಪಟ್ಟಿಯಿಂದ ಫೇಸ್‌ಬುಕ್ ಹಿಂದೆ ಉಳಿದಿತ್ತು.ಕಳೆದ ಏಪ್ರಿಲ್‌ನಲ್ಲಿ ಫೇಸ್‌ಬುಕ್ 44ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.

ಆ್ಯಪ್‌ಸ್ಟೋರ್‌ಗಳಲ್ಲಿ ಇತ್ತೀಚೆಗೆ ಬಿ–ರಿಯಲ್ ಟಾಪ್ 5 ರಲ್ಲಿ ಉಳಿದುಕೊಳ್ಳುತ್ತಿರುವುದು ಅಮೆರಿಕದಲ್ಲಿ ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಗೇಮಿಂಗ್ ಆ್ಯಪ್‌ಗಳನ್ನು ಹೊರತುಪಡಿಸಿದರೇ ಬಿ–ರಿಯಲ್ ಆ್ಯಪ್ ಅಮೆರಿಕದ ನಂಬರ್ 1 ಆ್ಯಪ್ ಆಗಿದೆ ಎಂದುಟೆಕ್‌ಕ್ರಂಚ್ ವೆಬ್‌ಸೈಟ್ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT