ಶುಕ್ರವಾರ, ಫೆಬ್ರವರಿ 21, 2020
22 °C

ಫೇಸ್‌ಬುಕ್, ಮೆಸೆಂಜರ್‌ನ ಟ್ವಿಟರ್ ಖಾತೆಗಳು ಹ್ಯಾಕ್!

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Facebook

ಸಾಮಾಜಿಕ ಮಾಧ್ಯಮ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಅದರ ಸಂದೇಶವಾಹಕ ವ್ಯವಸ್ಥೆ ಎಫ್‌ಬಿ ಮೆಸೆಂಜರ್‌ನ ಟ್ವಿಟರ್ ಖಾತೆಗಳು ಹ್ಯಾಕ್ ಆಗಿವೆ.

ಇಮೇಲ್ ಹೇಳಿಕೆಯಲ್ಲಿ ಟ್ವಿಟರ್ ವಕ್ತಾರರು ಈ ಕುರಿತು ಸ್ಪಷ್ಟಪಡಿಸಿದ್ದು, ಈ ಖಾತೆಗಳನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

"ಇದು ನಮ್ಮ ಗಮನಕ್ಕೆ ಬಂದ ತಕ್ಷಣವೇ ನಾವು ಈ ಖಾತೆಗಳನ್ನು ಲಾಕ್ ಮಾಡಿದ್ದು, ಅವುಗಳ ಮರುಸ್ಥಾಪನೆಗೆ ಫೇಸ್‌ಬುಕ್ ಜತೆಗೂಡಿ ಕೆಲಸ ಮಾಡುತ್ತಿದ್ದೇವೆ" ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಟ್ವಿಟರ್ ಇಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯಾಕ್ ಡೋರ್ಸೇ ಅವರ ಖಾತೆಯನ್ನೇ ಹ್ಯಾಕ್ ಮಾಡಲಾಗಿತ್ತು. ಹ್ಯಾಕ್ ಮಾಡಿದ ವ್ಯಕ್ತಿಯು ಈ ಖಾತೆಯ ಮೂಲಕ ಜನಾಂಗೀಯ ನಿಂದನೆಯುಳ್ಳ ಟ್ವೀಟ್‌ಗಳನ್ನು ಕಳುಹಿಸಿದ್ದ. ಅವರ ಖಾತೆಗೆ ಸುಮಾರು 40 ಲಕ್ಷ ಫಾಲೋವರ್‌ಗಳಿದ್ದರು. ಬಳಿಕ ಖಾತೆಯನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು