ಶನಿವಾರ, ಜೂನ್ 19, 2021
27 °C

ಟ್ರೆಂಡ್ ಆಯ್ತು ದ್ವಿಭಾಷಾ ನೀತಿಗೆ ಆಗ್ರಹಿಸಿ ನಡೆಸಿದ ಟ್ವಿಟರ್ ಅಭಿಯಾನ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

twitter campaign

ಬೆಂಗಳೂರು: ದ್ವಿಭಾಷಾ ನೀತಿಗೆ ಆಗ್ರಹಿಸಿ ನಡೆಸಲಾಗುತ್ತಿರುವ ಟ್ವಿಟರ್ ಅಭಿಯಾನ ಬುಧವಾರ ಟ್ರೆಂಡ್ ಆಗಿದೆ.

ದ್ವಿಭಾಷಾ ನೀತಿ ಜಾರಿಗೆ ತರುವಂತೆ ಒತ್ತಾಯಿಸಿ ಟ್ವಿಟರ್ ಅಭಿಯಾನಕ್ಕೆ ‘ನಮ್ಮ ಕಲ್ಯಾಣ ಕರ್ನಾಟಕ’ ಟ್ವಿಟರ್‌ ಹ್ಯಾಂಡಲ್‌ ಕರೆ ನೀಡಿತ್ತು. ಬೆಳಿಗ್ಗೆ 11 ಗಂಟೆ ಬಳಿಕ #WeWantTwolanguagepolicy ಮತ್ತು #ದ್ವಿಭಾಷಾನೀತಿ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್‌ ಮಾಡುವಂತೆ ವಿನಂತಿಸಲಾಗಿತ್ತು. ಈ ಪೈಕಿ ಸಂಜೆ ವೇಳೆಗೆ #WeWantTwolanguagepolicy ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ಅಭಿಯಾನ ಬೆಂಬಲಿಸಿ ನೂರಾರು ಮಂದಿ ಟ್ವೀಟ್ ಮಾಡಿದ್ದಾರೆ. ದ್ವಿಭಾಷಾ ನೀತಿ ಜಾರಿಯಾಗಬೇಕು, ಹಿಂದಿ ಹೇರಿಕೆ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

'ಕನ್ನಡಿಗರು ಭಾರತ ಒಕ್ಕೂಟ ಸೇರಿದ್ದು, ತಮಿಳು, ತೆಲುಗು, ಬಾಂಗ್ಲ, ಮರಾಠಿ,ಹಿಂದಿ ಸೇರಿದಂತೆ ಭಾರತದ ಅನೇಕ ಭಾಷಿಕರೊಡನೆ ಒಟ್ಟಾಗಿ ಬೆಳೆಯಲು. ಹಿಂದಿ ಕಲಿತು, ಹಿಂದಿಯವರಿಗೆ ನಮ್ಮೆಲ್ಲಾ ಉದ್ಯೋಗವನ್ನು ಬಿಟ್ಟುಕೊಟ್ಟು ಹಿಂದಿಯವರನ್ನು ಮಾತ್ರ ಬೆಳೆಸಲು ಅಲ್ಲ. ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಲಿ ಆಗ ಒಗ್ಗಟ್ಟು ತಾನೇ ತಾನಾಗಿ ಗಟ್ಟಿಯಾಗುತ್ತೆ’ ಎಂದು ಸಮಾನ ಭಾಷಾ ನೀತಿ ಹೋರಾಟಗಾರ, ಬನವಾಸಿ ಬಳಗದ ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ಟ್ವೀಟ್‌ಗಳು ಇಲ್ಲಿವೆ:

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು