ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಬ್ಲ್ಯೂ ಟಿಕ್‌ ಖಾತೆಗೆ ಶುಲ್ಕ: ಅಮೆರಿಕದಲ್ಲಿ ಶುರು, ಭಾರತದಲ್ಲೂ ಶೀಘ್ರ

Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

ನವದೆಹಲಿ: ನೀಲಿ ಬಣ್ಣದ ಟಿಕ್ (ಬ್ಲ್ಯೂ ಟಿಕ್‌) ಇರುವ ಟ್ವಿಟರ್ ಖಾತೆ ಸೇವೆಗೆ ಶುಲ್ಕ ವಿಧಿಸುವ ಕ್ರಮವು ಭಾರತದಲ್ಲಿ ‘ಇನ್ನು ಒಂದು ತಿಂಗಳಿಗೂ ಮೊದಲೇ ಶುರುವಾಗಲಿದೆ’ ಎಂದು ಟ್ವಿಟರ್ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ.

ಟ್ವಿಟರ್ ಖಾತೆಯ ಹೆಸರಿನ ಮುಂದೆ ಬ್ಲ್ಯೂ ಟಿಕ್‌ ಇದ್ದರೆ ಆ ಖಾತೆ ನಕಲಿ ಅಲ್ಲ ಎಂದು ಅರ್ಥ. ಈ ಸೇವೆಯನ್ನು ಪಡೆಯಲು ಬಳಕೆದಾರರು ಇನ್ನು ಮುಂದೆ ತಿಂಗಳಿಗೆ 8 ಡಾಲರ್ (₹ 655.86) ಪಾವತಿಸಬೇಕು ಎಂದು ಮಸ್ಕ್ ಈಚೆಗೆ ಹೇಳಿದ್ದರು. ಆದರೆ, ತಿಂಗಳ ಶುಲ್ಕ ಪಾವತಿಸಬೇಕು ಎಂಬ ಮಾತಿಗೆ ವ್ಯಾಪಕ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಈಗ ಮಸ್ಕ್ ನೀಡಿರುವ ಈ ಹೇಳಿಕೆಯು, ಭಾರತದಲ್ಲಿ ಈ ಸೇವೆಗಳಿಗೆ ಶುಲ್ಕ ಪಾವತಿಸುವುದು ಯಾವಾಗಿನಿಂದ ಶುರುವಾಗಬಹುದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದೆ.

ಭಾರತದಲ್ಲಿ ಈ ಸೇವೆಗೆ ಎಷ್ಟು ಶುಲ್ಕ ನಿಗದಿ ಮಾಡಲಾಗುತ್ತದೆ ಎಂಬ ಬಗ್ಗೆ ಕಂಪನಿಯ ಕಡೆಯಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಸರ್ಕಾರದಲ್ಲಿ ಹುದ್ದೆ ಹೊಂದಿರುವವರು, ಹೆಸರಾಂತ ಪತ್ರಕರ್ತರು, ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು, ಲೇಖಕರು, ಸಂಘಟನೆಗಳ ಪ್ರಮುಖರು ಟ್ವಿಟರ್‌ನಲ್ಲಿ ಬ್ಲ್ಯೂ ಟಿಕ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಬ್ಲ್ಯೂ ಟಿಕ್‌ ಸೇವೆಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕು ಎಂಬ ಮಾಹಿತಿ ನೀಡುವ ಸಂದರ್ಭದಲ್ಲಿ ಮಸ್ಕ್ ಅವರು, ಶುಲ್ಕವು ದೇಶದಿಂದ ದೇಶಕ್ಕೆ ಬದಲಾಗಲಿದೆ ಎಂಬ ಸೂಚನೆ ನೀಡಿದ್ದರು.

ಬಳಕೆದಾರರಿಂದ ಮಾಸಿಕ ಶುಲ್ಕ ಪಡೆಯುವ ಮೂಲಕ ಟ್ವಿಟರ್‌ಗೆ ಹೊಸ ಆದಾಯ ಮೂಲವೊಂದು ಸೃಷ್ಟಿಯಾಗಲಿದೆ ಎಂದು ಮಸ್ಕ್ ತಿಳಿಸಿದ್ದರು. ಟ್ವಿಟರ್ ಕಂಪನಿಯು ಬ್ಲ್ಯೂ ಟಿಕ್ ಇರುವ ಖಾತೆಗಳಿಗೆ ಶುಲ್ಕ ವಿಧಿಸುವುದನ್ನು ಶನಿವಾರದಿಂದ ಆರಂಭಿಸಿದೆ ಎಂದು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT