ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕು ಬೆಳ್ಳಿ, Distance ಬಂಗಾರ: ಕೊರೊನಾ ಕಾಲದ ಗಾದೆಗಳು

Last Updated 5 ಏಪ್ರಿಲ್ 2020, 4:16 IST
ಅಕ್ಷರ ಗಾತ್ರ

ಬೆಂಗಳೂರು: ಮಾರಕ ಕೊರೊನಾ ವೈರಸ್ ಸೋಂಕು, ಲಾಕ್‌ಡೌನ್ ತಂದೊಡ್ಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಆದರೆ ಈ ಸಂಕಟದ ವಾತಾವರಣ ಜನರಿಂದ ಹಾಸ್ಯಪ್ರಜ್ಞೆಯನ್ನು ಕಿತ್ತುಕೊಂಡಿಲ್ಲ. ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿ, ಫೇಸ್‌ಬುಕ್‌, ಹೆಲೊದಂಥ ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ಗಾದೆಗಳಿಗೆ ಹೊಸ ಅರ್ಥ ಕೊಡುವ ಪದಗಳನನ್ನು ಪೋಣಿಸುತ್ತಾ ಜನರು ಸೃಜನಶೀಲತೆ ಮೆರೆಯುತ್ತಿದ್ದಾರೆ.

ಗಾದೆಗಳ ಸ್ಯಾಂಪಲ್‌ ಇಲ್ಲಿದೆ. ನೀವೂ ಓದಿ. ದುರಿತ ಕಾಲದಲ್ಲಿ ನಗುವೂ ತುಸು ನೆಮ್ಮದಿ ಕೊಡಬಲ್ಲದು.

● ಕೈ ಕೆಸರಾದರೆ ಸೈನಟೈಜ಼ರ್ ಹಾಕಿ ತೊಳ್ಕೊ
● ಒಗ್ಗಟ್ಟಿನಲ್ಲಿ ಕರೋನ ಇದೆ
● ಎಲ್ಲರ ಮನೆ ಸಿಂಕ್ ತೂತೆ
● ಉಪ್ಪಿಗಿಂತ ರುಚಿಯಿಲ್ಲ ವೈದ್ಯರಿಗಿಂತ ದೇವರಿಲ್ಲ
● ಕೆಲಸವಿಲ್ಲದ ಬಡಗಿ ಬಿಸ್ಕೇಟಲ್ಲಿ ತೂತು ಎಣೆಸಿದನಂತೆ
● ಮಾತು ಆಡಿದರೆ ಹೋಯ್ತು ಮುತ್ತು ಕೊಟ್ಟರೆ ಹೊಯ್ತು
● ಕೆಟ್ಟು ಹಳ್ಳಿ ಸೇರು
● ಮಾತು ಬಲ್ಲವನಿಗೆ ಜಗಳವಿಲ್ಲ,ಮಾಸ್ಕ್ ಧರಿಸಿವನಿಗೆ ರೋಗವಿಲ್ಲ
● ಮಾತು ಮನೆ ಕೆಡುಸ್ತು,ಕರೋನ ಪ್ರಪಂಚ ಕೆಡುಸ್ತು
● ಮನೇಲಿದ್ದೋನೆ ಮಹಾಶೂರ, ಹೊರಬಿದ್ದವ ಹರೋಹರ
● ಬೆಂಗಳೂರಿಂದ ಬಂದಾಗ ಹೋದ ಮಾನ, ಮಾಸ್ಕ್, ಸ್ಯನಿಟೈಸರ್, ಹಾಕ್ಕೊಂಡು ತಿರುಗಿದರು ಬಾರದು.
● ಮಾಸ್ಕು ಬೆಳ್ಳಿ, Distance ಬಂಗಾರ
● ಉಪ್ಪಿಗಿಂತ ರುಚಿ ಇಲ್ಲ, ಕರೋನಗಿಂತ ರೋಗವಿಲ್ಲ
● ಮುಖಕ್ಕೆ ಮಾಸ್ಕ್ ಇಲ್ಲ ಅಂದ್ರೂ ಕೈಗೆ ಸಾನಿಟೈಜರ್ ಬೇಕಂತೆ
● ಪ್ಲೇಗಿಗೊಂದು ಕಾಲ ಕರೊನಕ್ಕೊಂದು ಕಾಲ
● ಕೆಮ್ಮಿದ್ದೆಲ್ಲಾ ಕೊರೋನಾ ಅಲ್ಲಾ,ಕೈಲಿದ್ದಿದ್ದೆಲ್ಲಾ ಸೈನಟೈಝರ್ ಅಲ್ಲ
● ಇರಲಾರದ್ಹಂಗೆ ಕೊರೋನಾ ಬಿಟ್ಕೋಂಡ್ರಂತೆ
● ಕರೀನಾಗೊಂದು ಕಾಲ, ಕೊರೊನಾಗೊಂದು ಕಾಲ
● ಬೀದೀಲಿ ಕೆಮ್ಮಿ ನೋಡು, ಹಾದೀಲಿ ಸೀನಿ ನೋಡು
● ಚೀನಾದಿಂದ ಬಂದ ಕೊರೊನಾ, ಮಾಸ್ಕ್‌ನಿಂದ ಮೂಗಿಗೆ ಬರಲ್ವಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT