ಅಭಿನಂದನ್ ಮರಳಿ ಬಂದಾಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಜಾತಿ ಹುಡುಕಿದವರೇ ಜಾಸ್ತಿ!

ಬುಧವಾರ, ಮಾರ್ಚ್ 20, 2019
25 °C

ಅಭಿನಂದನ್ ಮರಳಿ ಬಂದಾಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಜಾತಿ ಹುಡುಕಿದವರೇ ಜಾಸ್ತಿ!

Published:
Updated:

ಬೆಂಗಳೂರು: ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸುರಕ್ಷಿತವಾಗಿ ವಾಪಸ್ ಆಗುವವರೆಗೆ ದೇಶಕ್ಕೆ ದೇಶವೇ ಅವರಿಗಾಗಿ ಕಾಯುತ್ತಿತ್ತು. ಪಾಕ್ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ಅಟ್ಟಾರಿ- ವಾಘಾ ಗಡಿಯಲ್ಲಿ ಕಾಲಿಟ್ಟಾಗ ದೇಶದ ಜನರಿಗೆ ಅದು ಸಂಭ್ರಮದ ಕ್ಷಣವಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನ್ ಪರ ಜೈಕಾರಗಳು ಸ್ಟೇಟಸ್‍ಗಳಾಗಿ ಟ್ವೀಟ್‍ಗಳಾಗಿ ಮೂಡಿಬಂದರೆ, ಸುದ್ದಿ ಮಾಧ್ಯಮಗಳಲ್ಲಿ ಅಭಿನಂದನ್ ಬಗ್ಗೆ ಕ್ಷಣ ಕ್ಷಣದ ಸುದ್ದಿಗಳು ಬಿತ್ತರವಾಗುತ್ತಿತ್ತು.

ಕಳೆದ ಮೂರು ದಿನಗಳಲ್ಲಿ ಎಲ್ಲೆಡೆ ಅಭಿನಂದನ್ ಅವರದ್ದೇ ಸುದ್ದಿ, ಇತ್ತ ಗೂಗಲ್‍ನಲ್ಲಿ ಅಭಿನಂದನ್ ಹೆಸರು ಟ್ರೆಂಡಿಂಗ್ ಆಗಿತ್ತು. ಅದರಲ್ಲಿಯೂ ಅಭಿನಂದನ್ ವರ್ಧಮಾನ್ ಅವರ ಜಾತಿ ಯಾವುದು ಎಂದು ಗೂಗಲಿಸಿದವರ ಸಂಖ್ಯೆಯೇನೂ ಕಮ್ಮಿಯಿಲ್ಲ.

ಗೂಗಲ್ ಸರ್ಚ್ ಬಾರ್‌ನಲ್ಲಿ Varthaman ಎಂದು ಟೈಪಿಸಿದರೆ ಮೊದಲ 'ಪದ ಸಲಹೆ' Varthaman caste ಎಂದು ಬರುತ್ತದೆ. ಕಳೆದ ಒಂದು ದಿನದ ಗೂಗಲ್ ಟ್ರೆಂಡ್ ನೋಡಿದರೆ ಶುಕ್ರವಾರ ಹೆಚ್ಚು ಮಂದಿ ವರ್ಧಮಾನ್ ಅವರ ಜಾತಿ ಹುಡುಕಿದ್ದಾರೆ,
ಜಾತಿ ಹುಡುಕಿದವರಲ್ಲಿ ಗುಜರಾತ್ ಮಂದಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಾರ್ಚ್ 1, ಶುಕ್ರವಾರ ರಾತ್ರಿ 9.30ರ ಹೊತ್ತಿಗೆ ಅತೀ ಹೆಚ್ಚು ಮಂದಿ ಗೂಗಲ್‌ನಲ್ಲಿ ವರ್ಧಮಾನ್ ಅವರ ಜಾತಿ ಹುಡುಕಿದ್ದಾರೆ. ಅಂದರೆ ವರ್ಧಮಾನ್ ಪಾಕ್ ವಶದಿಂದ ಮುಕ್ತನಾಗಿ ಭಾರತಕ್ಕೆ ಕಾಲಿಟ್ಟ ಕ್ಷಣ, ಜನರು ಹುಡುಕಿದ್ದು ಆತನ ಜಾತಿಯನ್ನು !

ಅಭಿನಂದನ್ ವಿಷಯಕ್ಕೆ ಸಂಬಂಧಿಸಿ ಗೂಗಲ್‍ನಲ್ಲಿ ಸರ್ಚ್ ಆದ ಇನ್ನಿತರ ಪ್ರಶ್ನೆಗಳೆಂದರೆ ಅಭಿನಂದನ್ ವರ್ಧಮಾನ್, ತಮಿಳುನಾಡಿನಲ್ಲಿರುವ ವರ್ಧಮಾನ್ ಜಾತಿ, ವರ್ಧಮಾನ್ ಯಾವ ಜಾತಿಗೆ ಸೇರಿದ್ದು? ಅಭಿನಂದನ್ ವರ್ಧಮಾನ್ ಪ್ರೊಫೈಲ್, ಅಭಿನಂದನ್ ವರ್ಧಮಾನ್ ಜಾತಿ ಹಿಂದಿಯಲ್ಲಿ ಎಂಬುದು ಹೆಚ್ಚು ಗೂಗಲಿಸಿದ ವಿಷಯಗಳಾಗಿವೆ.

ಸೇನೆಯಲ್ಲಿ ಬ್ರಾಹ್ಮಣರು ಇಲ್ಲ ಅಂದವರು ಯಾರು?


ಸೇನೆಯಲ್ಲಿರುವ ಬ್ರಾಹ್ಮಣರ ಸಂಖ್ಯೆ ಎಷ್ಟು? ಬ್ರಾಹ್ಮಣರಿಗಿಂತ ಇತರ ಜಾತಿಯವರೇ ಸೇನೆಯಲ್ಲಿರುತ್ತಾರೆ ಎಂಬ ಚರ್ಚೆಯೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದಿತ್ತು. ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರ ಜಾತಿ ಪಟ್ಟಿಯೂ ಇಲ್ಲಿ ಚರ್ಚೆಗೆ ಬಂದಿತ್ತು. ಇದೀಗ ಅಭಿನಂದನ್ ಬ್ರಾಹ್ಮಣ ಜಾತಿಗೆ ಸೇರಿದವರು ಎಂದು ತೋರಿಸುವ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 1

  Sad
 • 0

  Frustrated
 • 18

  Angry

Comments:

0 comments

Write the first review for this !