ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಿತ್ ಪಾತ್ರಾ ಪ್ರಕರಣ: ನೋಟಿಸ್ ನೀಡಲು ಟ್ವಿಟರ್ ಕಚೇರಿಗೆ ತೆರಳಿದ್ದ ಪೊಲೀಸರು

Last Updated 24 ಮೇ 2021, 17:41 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರ ಟ್ವಿಟರ್ ಖಾತೆಗೆ ‘ತಿರುಚಲಾದ ಮಾಹಿತಿ’ ಎಂದು ಟ್ಯಾಗ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಸಂಸ್ಥೆಯ ಭಾರತದ ಎಂಡಿಗೆ ನೋಟಿಸ್ ನೀಡಲು ಪೊಲೀಸರು ಟ್ವಿಟರ್ ಕಚೇರಿಗೆ ತೆರಳಿದ್ದ ಬಗ್ಗೆ ಮಾಹಿತಿ ಬಂದಿದೆ

ಭಾರತೀಯ ಜನತಾ ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಅವರು ಕಳೆದ ವಾರ ಟ್ವಿಟ್ಟರ್ ನಲ್ಲಿ ದಾಖಲೆಯೊಂದರ ಭಾಗಗಳನ್ನು ಹಂಚಿಕೊಂಡಿದ್ದರು. ಅದು ನಕಲಿ ದಾಖಲೆ ಎಂದು ಆರೋಪಿಸಿದ್ದ ಪ್ರತಿಪಕ್ಷ ಕಾಂಗ್ರೆಸ್, ಟ್ವಿಟರ್‌ ಸಂಸ್ಥೆಗೆ ದೂರು ನೀಡಿತ್ತು. ಆ ಬಳಿಕ, ಸಂಬಿತ್ ಪಾತ್ರಾ ಟ್ವಿಟರ್ ಖಾತೆ ಸೇರಿ ಕೆಲ ಖಾತೆಗಳಿಗೆ ‘ತಿರುಚಲಾದ ಮಾಹಿತಿ’ ಎಂಬ ಟ್ಯಾಗ್ ಹಾಕಲಾಗಿತ್ತು.

ಈ ಮಧ್ಯೆ, ಟ್ಯಾಗ್ ತೆಗೆಯುವಂತೆ ಕೇಂದ್ರ ಸರ್ಕಾರವು ಟ್ವಿಟರ್ ಸಂಸ್ಥೆಗೆ ಸೂಚಿಸಿತ್ತು ಎನ್ನಲಾಗಿದೆ. ಆದರೂ ಟ್ಯಾಗ್ ತೆಗೆದಿರಲಿಲ್ಲ.

ಈ ಮಧ್ಯೆ, ಸೋಮವಾರ, ಈ ಬಗ್ಗೆ ಹೇಳಿಕೆ ನೀಡಿರುವ ದೆಹಲಿ ಪೊಲೀಸರು, ತಮ್ಮ ಖಾತೆಗೆ ಮಾಡಲಾಗಿರುವ ಟ್ಯಾಗ್ ಬಗ್ಗೆ ಸಂಬಿತ್ ಪಾತ್ರಾ ಅವರು ದೂರು ನೀಡಿದ್ದಾರೆ. ಸತ್ಯಾಸತ್ಯತೆ ಅರಿಯಲು ವಿಚಾರಣೆಯ ಭಾಗವಾಗಿ ನೋಟಿಸ್ ನೀಡಲು ಟ್ವಿಟರ್ ಕಚೇರಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.

‘ಟ್ವಿಟರ್ ಇಂಡಿಯಾ ಎಂಡಿ ನೀಡಿದ ಉತ್ತರಗಳು ಬಹಳ ಅಸ್ಪಷ್ಟವಾಗಿರುವುದರಿಂದ, ನೋಟಿಸ್ ನೀಡಲು ಸೂಕ್ತ ವ್ಯಕ್ತಿ ಯಾರು ಎಂದು ನಾವು ತಿಳಿಯಲು ಬಯಸಿದ್ದರಿಂದ ನಮ್ಮ ಭೇಟಿ ಅಗತ್ಯವಾಗಿತ್ತು’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಉಲ್ಲೇಖಿಸಿನೀಡಲಾಗಿರುವ ಪೊಲೀಸ್ ಹೇಳಿಕೆ ತಿಳಿಸಿದೆ.

ಟ್ವಿಟರ್ ತನ್ನ ‘ತಿರುಚಲಾದ ಮಾಹಿತಿ’ ಟ್ಯಾಗ್ ತಿರುಚಲಾದ ಮಾಹಿತಿ ಇರುವ ವಿಡಿಯೊಗಳು, ಆಡಿಯೋ ಮತ್ತು ಚಿತ್ರಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದೆ.

ಕಚೇರಿಗೆ ಪೊಲೀಸರ ಭೇಟಿ ಬಗ್ಗೆ ಟ್ವಿಟರ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT