ಭಾನುವಾರ, ಆಗಸ್ಟ್ 14, 2022
20 °C

ದೇಶದ ಪ್ರಮುಖ ನಗರಗಳಲ್ಲಿ ಇನ್‌ಸ್ಟಾಗ್ರಾಂ ಸೇವೆ ವ್ಯತ್ಯಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮೆಟಾ ಒಡೆತನದ ಫೋಟೊ ಶೇರಿಂಗ್ ಅಪ್ಲಿಕೇಶನ್ ಇನ್‌ಸ್ಟಾಗ್ರಾಂ ಸೇವೆಯಲ್ಲಿ ಬುಧವಾರ ವ್ಯತ್ಯಯ ಉಂಟಾಗಿದೆ.

ವೆಬ್‌ಸೈಟ್‌ ಹಾಗೂ ಸೇವೆಗಳ ಸ್ಥಿತಿಯ ಕುರಿತು ಮಾಹಿತಿ ಒದಗಿಸುವ 'ಡೌನ್ ಡಿಟೆಕ್ಟರ್' ಪ್ರಕಾರ, ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ಇನ್‌‌ಸ್ಟಾಗ್ರಾಂ ಸೇವೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬುಧವಾರ ವ್ಯತ್ಯಯ ಉಂಟಾಗಿದೆ.

ಬೆಂಗಳೂರು, ನವದೆಹಲಿ, ಹೈದರಾಬಾದ್, ಮುಂಬೈ, ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಅಡಚಣೆ ಎದುರಾಗಿದೆ ಎಂದು ಮಾಹಿತಿ ಒದಗಿಸಿದೆ.

 

 

 

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಬಳಕೆದಾರರು ದೂರಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಚರ್ಚಿಸಿದ್ದಾರೆ.

 

ಟ್ವಿಟರ್‌ನಲ್ಲಿ #instagramdown ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು