Instagram ಕಂಟೆಂಟ್ ಸ್ಥಿತಿ ಬಗ್ಗೆ ಕ್ರಿಯೇಟರ್‌ಗಳಿಗೆ ಮಾಹಿತಿ ನೀಡಲಿದೆ ಕಂಪನಿ

ನವದೆಹಲಿ: ಮೆಟಾ ಒಡೆತನದ ಇನ್‌ಸ್ಟಾಗ್ರಾಂ, ತನ್ನ ವೇದಿಕೆಯಲ್ಲಿ ಕ್ರಿಯೇಟರ್ಸ್ ಪೋಸ್ಟ್ ಮಾಡುವ ಫೋಟೊ ಮತ್ತು ರೀಲ್ಸ್ ವಿಡಿಯೊ ಸ್ಥಿತಿಯ ಬಗ್ಗೆ ರಚನೆಕಾರರಿಗೆ ಮಾಹಿತಿ ನೀಡಲಿದೆ.
ಇನ್‌ಸ್ಟಾ ಕ್ರಿಯೇಟರ್ಸ್ ವಿವಿಧ ಕಂಟೆಂಟ್‌ಗಳನ್ನು ರಚಿಸುತ್ತಾರೆ. ಅವುಗಳು ಅವರ ಫಾಲೋವರ್ಸ್ ಅನ್ನು ಮಾತ್ರ ತಲುಪುವುದೇ ಅಥವಾ ಇತರ ಬಳಕೆದಾರರಿಗೂ ಲಭ್ಯವಾಗಲಿದೆಯೇ ಎನ್ನುವುದನ್ನು ರಚನೆಕಾರರು ತಿಳಿಯಬಹುದು.
ಜತೆಗೆ, ಕಂಟೆಂಟ್ ಕುರಿತಂತೆ ಯಾವುದೇ ಕಾಪಿರೈಟ್, ನಿರ್ಬಂಧ ಇದ್ದರೂ ತಿಳಿಯುವುದರಿಂದ, ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.
WhatsApp: ಹೊಸ ಅಪ್ಡೇಟ್ನಲ್ಲಿ ಅವತಾರ್ ಫೀಚರ್
✅ Account Status Update ✅
We're expanding Account Status so professional accounts can understand if their content may be eligible to be recommended to non-followers.
Here’s how to get to it: Profile -> Menu -> Settings -> Account -> Account Status pic.twitter.com/QbxjQF06vR
— Adam Mosseri (@mosseri) December 7, 2022
ಇನ್‌ಸ್ಟಾಗ್ರಾಂ ಈಗಾಗಲೇ ವಿವಿಧ ಇತರ ಆ್ಯಪ್‌ಗಳಿಂದ ಸ್ಪರ್ಧೆ ಎದುರಿಸುತ್ತಿದೆ. ಹೀಗಾಗಿ ಹೆಚ್ಚಿನ ಬಳಕೆದಾರರನ್ನು ಉಳಿಸಿಕೊಳ್ಳುವುದು ಮತ್ತು ಅಧಿಕ ಕಂಟೆಂಟ್ ಒದಗಿಸಲು ಅನುಕೂಲವಾಗುವಂತೆ ವಿವಿಧ ಕ್ರಮ ಕೈಗೊಂಡಿದೆ. ಕಂಟೆಂಟ್ ರಚನೆಕಾರರಿಗೆ ತರಬೇತಿ ಕಾರ್ಯಕ್ರಮವನ್ನು ಕೂಡ ಒದಗಿಸುತ್ತಿದೆ.
YouTube: ದೇಶದಲ್ಲಿ 17 ಲಕ್ಷ ವಿಡಿಯೊಗಳನ್ನು ಡಿಲೀಟ್ ಮಾಡಿದ ಯೂಟ್ಯೂಬ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.