ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಮಹಿಳೆಯರು ಹೆಚ್ಚು ಮಾತನಾಡುವ ವಿಷಯಗಳೇನು?–'ಟ್ವಿಟರ್' ಸಂಶೋಧನೆ ಬಹಿರಂಗ

Last Updated 5 ಮಾರ್ಚ್ 2021, 8:09 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ, ಭಾರತದಲ್ಲಿ ಮಹಿಳೆಯರು ಯಾವುದರ ಬಗ್ಗೆ ನಿತ್ಯವೂ ಚರ್ಚಿಸುತ್ತಾರೆ ಎಂಬುದರ ಬಗ್ಗೆ ಟ್ವಿಟರ್‌ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಮಹಿಳೆಯರ ಟ್ವೀಟ್‌ಗಳನ್ನು ಆಧರಿಸಿ ಒಳನೋಟ ನೀಡಲಾಗಿದೆ.

ಜನವರಿ 2019ರಿಂದ ಫೆಬ್ರುವರಿ 2021ರ ನಡುವೆ ಭಾರತದ 10 ನಗರಗಳಲ್ಲಿ ಮಹಿಳೆಯರು ಕಳುಹಿಸಿದ 5,22,992 ಟ್ವೀಟ್‌ಗಳ ವಿಶ್ಲೇಷಣೆ ಹಾಗೂ 700 ಮಹಿಳೆಯರಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.

ಮಹಿಳೆಯರು ಹೆಚ್ಚಾಗಿ ಚರ್ಚಿಸಿರುವ ವಿಷಯಗಳನ್ನು ಆಧರಿಸಿ, ಒಂಬತ್ತು ಪ್ರಮುಖ ವಿಷಯಗಳ ಪಟ್ಟಿ ಮಾಡಲಾಗಿದೆ. ಫ್ಯಾಷನ್, ಪುಸ್ತಕಗಳು, ಸೌಂದರ್ಯ, ಮನರಂಜನೆ ಮತ್ತು ಆಹಾರದ ಬಗ್ಗೆ ಹೆಚ್ಚು ಟ್ವೀಟಿಸಿರುವುದು ತಿಳಿದು ಬಂದಿದೆ. ಶೇ 24.9ರಷ್ಟು ಫ್ಯಾಷನ್‌ ಪಾಯಿಂಟ್‌ಗಳು ಮತ್ತು ಅಭಿರುಚಿಗಳಿಗೆ ಸಂಬಂಧಿಸಿದ ಮಾತುಕತೆ, ಪ್ರಚಲಿತ ವಿದ್ಯಮಾನಗಳು (ಶೇ 20.8), ಸಂಭ್ರಮಾಚರಣೆಯ ಕ್ಷಣಗಳು (ಶೇ 14.5), ಸಮುದಾಯಗಳು (ಶೇ 11.7) ಹಾಗೂ ಸಾಮಾಜಿಕ ಬದಲಾವಣೆ (ಶೇ 8.7) ವಿಷಯಗಳ ಬಗ್ಗೆ ಮಹಿಳೆಯರು ಹೆಚ್ಚು ಟ್ವೀಟಿಸಿದ್ದಾರೆ.

ನಿತ್ಯದ ಹರಟೆ ಮತ್ತು ಸಂಭ್ರಮಾಚರಣೆಯ ಕ್ಷಣಗಳ ಬಗೆಗಿನ ಟ್ವೀಟ್‌ಗಳಿಗೆ ಹೆಚ್ಚು ಸರಾಸರಿ ಸಂಖ್ಯೆಯ ಲೈಕ್‌ಗಳು, ಫ್ಯಾಷನ್‌ ಪಾಯಿಂಟ್‌ಗಳು ಮತ್ತು ಅಭಿರುಚಿಗಳ ಟ್ವೀಟ್‌ಗಳಿಗೆ ಅತಿ ಹೆಚ್ಚು ಪ್ರತಿಕ್ರಿಯೆಗಳು ಹಾಗೂ ಸಮುದಾಯಗಳು, ಸವಾಲುಗಳಿಗೆ ಸಂಬಂಧಿಸಿದ ಟ್ವೀಟ್‌ಗಳು ಹೆಚ್ಚು ರಿಟ್ವೀಟ್ ಕಂಡಿವೆ.

ನಗರವಾರು ಅಭಿರುಚಿ ಬದಲು

ಚೆನ್ನೈನಲ್ಲಿ ಸಂಭ್ರಮಾಚರಣೆಯ ಕ್ಷಣಗಳು, ಸೃಜನಾತ್ಮಕ ಪ್ರದರ್ಶನ ಮತ್ತು ದೈನಂದಿನ ಹರಟೆ ವಿಷಯಗಳು ಮುಂದಿದ್ದರೆ, ಸಮುದಾಯಗಳು, ಸಾಮಾಜಿಕ ಬದಲಾವಣೆ ಮತ್ತು ಸವಾಲುಗಳ ಹಂಚಿಕೆಯಲ್ಲಿ ಬೆಂಗಳೂರು ಪ್ರಾಬಲ್ಯ ಸಾಧಿಸಿದೆ. ಫ್ಯಾಷನ್‌ ಪಾಯಿಂಟ್‌ಗಳು, ಅಭಿರುಚಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಗುವಾಹಟಿಯಲ್ಲಿ ಹೆಚ್ಚು ಮಹಿಳೆಯರು ಟ್ವೀಟಿಸಿದ್ದಾರೆ.

'ನಾವು ಟ್ವಿಟರ್‌ನಲ್ಲಿ ಮಹಿಳೆಯರ ಬಗ್ಗೆ ನಮ್ಮ ಅರಿವು ಬೆಳೆಸಿಕೊಳ್ಳಲು ಈ ಸಂಶೋಧನೆಯನ್ನು ನಿಯೋಜಿಸಿದೆವು. ಫಲಿತಾಂಶಗಳಿಂದ ನಾವು ಬಹಳ ಪ್ರೇರಿತರಾಗಿದ್ದೇವೆ' ಎಂದು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಮನೀಶ್ ಮಹೇಶ್ವರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT